Top 10 Advantages of Digital Marketing in Kannada 2024

ಭಾರತದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಗಮನಾರ್ಹ ಬೆಳವಣಿಗೆಯನ್ನು ಹೊಂದುತ್ತಿದೆ. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಹೆಚ್ಚು ಆಧುನೀಕರಣಗೊಳ್ಳುತ್ತಿದ್ದಂತೆ ಡಿಜಿಟಲ್ ಮಾರ್ಕೆಟಿಂಗ್ ನ‌ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಅತಿ ವೇಗವಾಗಿ ಬೆಳೆಯುತ್ತಿರುವ ಇಂಡಸ್ಟ್ರಿಯಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕೂಡ ಒಂದಾಗಿದೆ. ಡಿಜಿಟಲ್ ಮಾರ್ಕೆಟಿಂಗ್ ಅನೇಕ ಪ್ರಯೋಜನಗಳನ್ನು ಹೊಂದಿದೆ. ಹಾಗಾದರೆ ಏನೆಲ್ಲಾ ಪ್ರಯೋಜನಗಳನ್ನ (Advantages of digital marketing) ಹೊಂದಿದೆ ಎಂಬುದನ್ನು ಈ ಬ್ಲಾಗ್ ಪೋಸ್ಟ್ ನಲ್ಲಿ ಮುಂದೆ ತಿಳಿಯೋಣ.

ಪ್ರತಿಯೊಬ್ಬರ ಮೊಬೈಲ್ ಮತ್ತು ಲ್ಯಾಪ್ಟಾಪ್ ಗಳ ಬಳಕೆಯಿಂದಾಗಿ ದಿನೇ ದಿನೇ ಇದರ ಬಳಕೆ ಹೆಚ್ಚಾಗುತ್ತಿದೆ. ಡಿಜಿಟಲ್ ಮಾರ್ಕೆಟಿಂಗ್ ನ ವಾರ್ಷಿಕ ಬೆಳವಣಿಗೆ ದರ 27 ರಿಂದ 32% ರಷ್ಟಿದೆ. 

ಆಯಸ್ಕಾಂತ ಕಬ್ಬಿಣದ ತುಕ್ಕುಗಳನ್ನು ಸೆಳೆಯುವಂತೆ, ಡಿಜಿಟಲ್ ಮಾರ್ಕೆಟಿಂಗ್ ಜಗತ್ತಿನ ಜನರನ್ನು ತನ್ನೆಡೆಗೆ ಸೆಳೆಯುತ್ತಿದೆ. ಬೇರೆ ಬೇರೆ ಕ್ಷೇತ್ರದಲ್ಲಿರುವ ಜನಗಳು ಕೂಡ ಬಯಸಿ ಡಿಜಿಟಲ್ ಮಾರ್ಕೆಟಿಂಗ್ ಕಡೆ ದಾರಿಸುತ್ತಿದ್ದಾರೆ

Digital Marketing Meaning in Kannada

ಡಿಜಿಟಲ್ ಮಾರ್ಕೆಟಿಂಗ್ ಎಂದರೆ ಆನ್ಲೈನ್ ಮಾರುಕಟ್ಟೆಯಾಗಿದೆ. ಡಿಜಿಟಲ್ ಎಂಬ ಹೆಸರೇ ಸೂಚಿಸುವಂತೆ ಇದು ಡಿಜಿಟಲ್ ಆಗಿ ಎಲೆಕ್ಟ್ರಾನಿಕ್ ಡಿವೈಸ್ ಗಳನ್ನು ಉಪಯೋಗಿಸಿಕೊಂಡು ಮಾಡುವ ಮಾರುಕಟ್ಟೆಯಾಗಿದೆ. ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್, ಮೊಬೈಲ್ ಗಳಂತ ಸಾಧನಗಳನ್ನು ಉಪಯೋಗಿಸಿಕೊಂಡು ಆನ್ಲೈನ್ ನಲ್ಲಿ ಕೆಲಸ ಮಾಡುವುದಾಗಿದೆ.

ವ್ಯಾಪಾರದ ಉತ್ಪನ್ನಗಳನ್ನು ಪ್ರದರ್ಶಿಸವ, ಜಾಹೀರಾತುಗಳನ್ನು ನೀಡುವ, ಬ್ಲಾಗ್ ಅಥವಾ ವೆಬ್ಸೈಟ್ ಗೆ ಟ್ರಾಫಿಕ್ ಅನ್ನು ತರುವ ಪ್ರಕ್ರಿಯೆಯೇ ಡಿಜಿಟಲ್ ಮಾರ್ಕೆಟಿಂಗ್. 

Advantages of Digital Marketing in Kannada

ಡಿಜಿಟಲ್ ಮಾರ್ಕೆಟಿಂಗ್ ಎಲ್ಲಾ ಕ್ಷೇತ್ರಗಳಿಗೆ ಮೂಲಭೂತ ಅಂಶವಾಗಿದೆ. Digital Marketing ಜಗತ್ತಿನ ಎಲ್ಲಾ ರಂಗದಲ್ಲೂ ಹಲವಾರು ಪ್ರಯೋಜನಗಳನ್ನು ನೀಡುತ್ತಿದೆ. ಅಗಾಧವಾಗಿ ಬೆಳೆಯುತ್ತಿರುವ ಇಂಡಸ್ಟ್ರಿಯಲ್ಲಿ ಜನಪ್ರಿಯ ಇಂಡಸ್ಟ್ರಿ ಡಿಜಿಟಲ್ ಮಾರ್ಕೆಟಿಂಗ್ ಆಗಿದೆ. ಎಲ್ಲರೂ ತಮ್ಮನ್ನು ಡಿಜಿಟಲ್ ಮಾರ್ಕೆಟಿಂಗ್ ಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಬಯಸುತ್ತಾರೆ.

ಯಾವುದೇ ವ್ಯಾಪಾರ ಮತ್ತು ಸೇವೆಗಳನ್ನು ಸರಿಯಾದ ಜನರಿಗೆ ಸರಿಯಾದ ಸಮಯದಲ್ಲಿ ತಲುಪಿಸುವಂತೆ ಮಾಡಲು ಡಿಜಿಟಲ್ ಮಾರ್ಕೆಟಿಂಗ್ ಅವಕಾಶ ಮಾಡಿಕೊಟ್ಟಿದೆ. ಲಭ್ಯವಿರುವ ಅನೇಕ ಸಂಪನ್ಮೂಲಗಳನ್ನು ಬಳಸಿಕೊಂಡು ಯಶಸ್ವಿಯಾಗಿ ಮತ್ತು ಪರಿಣಾಮಕಾರಿಯಾಗಿ ಡಿಜಿಟಲ್ ಮಾರ್ಕೆಟಿಂಗ್ ಅನ್ನು ಬಳಕೆ ಮಾಡಲಾಗುತ್ತದೆ. 

Advantages of Digital Marketing in India in Kannada

10 Digital Marketing Advantages in Kannada 2024.

ಕೋವಿಡ್ ಬಂದಾಗ ನಿಂದಲೂ ಇದರ ಪ್ರಭಾವ ತೀವ್ರ ಗತಿಯಲ್ಲಿದೆ. ಆನ್ಲೈನಲ್ಲಿ ವ್ಯಾಪಾರ ಮಾಡುವವರ ಸಂಖ್ಯೆ ಮತ್ತು ಉದ್ಯೋಗ ಹುಡುಕುವರ ಸಂಖ್ಯೆ ಹೆಚ್ಚಾಗಿದೆ. ಯಾವುದೇ ಉತ್ಪನ್ನ ಅಥವಾ ಸೇವೆಯನ್ನು ನಿರ್ದಿಷ್ಟ ಜನರಿಗೆ ಪ್ರಸಿದ್ಧ ಪಡಿಸುವಲ್ಲಿ ಡಿಜಿಟಲ್ ಮಾರ್ಕೆಟಿಂಗ್ ನ ಕೊಡುಗೆ ಅಪಾರವಾಗಿದೆ.

ಇಂದಿನ ಡಿಜಿಟಲ್ ಪ್ರಪಂಚದಲ್ಲಿ ಲಭ್ಯವಿರುವ ಎಲ್ಲಾ ಸಾಧನ ಸಂಪರ್ಕಗಳನ್ನು ಬಳಸಿಕೊಂಡು ಅನೇಕ ಕೊಡುಗೆಗಳನ್ನು ನೀಡಿದೆ. ಡಿಜಿಟಲ್ ಮಾರ್ಕೆಟಿಂಗ್ ನ ಕೆಲವು ಪ್ರಯೋಜನಗಳು ಈ ಕೆಳಗಿನಂತಿವೆ:

  • ಅಂತರಾಷ್ಟ್ರೀಯ ವ್ಯಾಪ್ತಿ – International Reach
  • ಲೈವ್ ಕಮ್ಯುನಿಕೇಶನ್ – Live Communication
  • ಲೆಕ್ಕಿಸಬಹುದಾದ ಫಲಿತಾಂಶ – Calculable Outcome
  • ವೆಚ್ಚ ಪರಿಣಾಮಕಾರಿ – Cost Efficient
  • ಬ್ರಾಂಡ್ ಗುರುತಿಸುವಿಕೆ ಮತ್ತು ಅವೇರ್ನೆಸ್ – Brand Recognition and Awareness
  • ಪರಿವರ್ತನ ದರ ಏರಿಕೆ – Increased Conversion Rate
  • ವೈಯಕ್ತಿಕರಣ – Personalisation
  • ಸಮೀಪಿಸುವಿಕೆ – Approachability 
  • ಏರಿಕೆ ROI – Increased ROI
  • ನಮ್ಯತೆ – Flexibility

Top 10 digital marketing advantages 2024

ಈ ಬ್ಲಾಗ್ ಪೋಸ್ಟ್ ನಲ್ಲಿ ಟಾಪ್ 10 ಡಿಜಿಟಲ್ ಮಾರ್ಕೆಟಿಂಗ್ ನ ಉಪಯೋಗಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ. 

1. ಅಂತರಾಷ್ಟ್ರೀಯ ವ್ಯಾಪ್ತಿ – International Reach

ಡಿಜಿಟಲ್ ಮಾರ್ಕೆಟಿಂಗ್ ಕೇವಲ ದೇಶಿಯವಾಗಿ ಅಷ್ಟೇ ಅಲ್ಲದೆ ಜಾಗತಿಕವಾಗಿ ವ್ಯಾಪಿಸಿಕೊಂಡಿದೆ. ಯಾವುದೇ ಅಡೆತಡೆಗಳಿಲ್ಲದೆ ಜಾಗತಿಕವಾಗಿ ಸಂಭ್ರಮ ಗ್ರಾಹಕರೊಂದಿಗೆ ಅಥವಾ ಪ್ರೇಕ್ಷಕರೊಂದಿಗೆ ವ್ಯವಹರಿಸಬಹುದು. ಯಾವುದೇ ಉತ್ಪನ್ನ ಅಥವಾ ಸೇವೆಯನ್ನು ಕೆಲವು ಸಂಪನ್ಮೂಲಗಳನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ತಲುಪಿಸಬಹುದಾಗಿದೆ.

ಜಾಗತಿಕ ಎಲ್ಲೆಯನ್ನು ಮೀರಿ ವ್ಯವಹರಿಸಲು ಡಿಜಿಟಲ್ ಮಾರ್ಕೆಟಿಂಗ್ ಒಂದು ಸಾಧನವಾಗಿದೆ. ಯಾವುದೇ ಉತ್ಪನ್ನ, ಸೇವೆ, ವ್ಯಾಪಾರವನ್ನು ಜಾಗತಿಕವಾಗಿ ಪರಿಣಾಮಕಾರಿಯಾಗಿ ಮಾರುಕಟ್ಟೆ ಮಾಡಲು ಯೋಗ್ಯ ಸಾಧನವಾಗಿದೆ. 

ಯಾವುದೇ ವ್ಯಾಪಾರ ಅಥವಾ ಸೇವೆಯನ್ನು ಆನ್ಲೈನಿಗೆ ತರಲು ಡಿಜಿಟಲ್ ಮಾರ್ಕೆಟಿಂಗ್ ತುಂಬಾ ಉಪಯೋಗವಾಗಿದೆ. ಆಫ್ಲೈನ್ ಮಾರುಕಟ್ಟೆಗಿಂತ ಆನ್ಲೈನ್ ಮಾರುಕಟ್ಟೆ ತುಂಬಾ ವಿಶಾಲವಾಗಿದೆ. ಮತ್ತು ಪ್ರತಿ ಸ್ಪರ್ಧಿಗಳು ತುಂಬಾ ಇದಾರೆ. ಅವರನ್ನು ಮೀರಿ ದಾಟಬೇಕಾದರೆ ಡಿಜಿಟಲ್ ಮಾರ್ಕೆಟಿಂಗ್ ಒಂದು ರಾಕೆಟ್ ಸಾಧನವಾಗಿದೆ. 

ಒಂದು ಬ್ರಾಂಡ್ ನ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಆನ್ಲೈನ್ ಜಗತ್ತಿನಲ್ಲಿ ಅಸ್ತಿತ್ವವನ್ನು ಉಳಿಸಿಕೊಳ್ಳಲು ಡಿಜಿಟಲ್ ಮಾರ್ಕೆಟಿಂಗ್ ತುಂಬಾ ಉಪಾಯಕಾರಿಯಾಗಿದೆ. ಜಾಗತಿಕವಾಗಿ ಪ್ರೇಕ್ಷಕರನ್ನು ಗಳಿಸಲು, ಉತ್ಪನ್ನ ವ್ಯಾಪಾರ ಸೇವೆಯ ಬಗ್ಗೆ ಒಲವು ಮೂಡಿಸಲು ಅನುಕೂಲವಾಗಿದೆ. 

ಆದರೆ ಡಿಜಿಟಲ್ ಮಾರ್ಕೆಟಿಂಗ್ ಎಂಬುದು ಒಂದು ರಾಕೆಟ್ ಸೈನ್ಸ್ ಅಲ್ಲ. ಇದೊಂದು ಸಮಯವನ್ನು ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದೆ, ಹಾಗಾಗಿ ಸಮಯ ತಾಳ್ಮೆ ಎರಡೂ ಬೇಕಾಗುತ್ತವೆ. ಇಲ್ಲಿ ಕೂಡ ಕೆಲವೊಂದು ದೋಷಗಳು ಸಮಸ್ಯೆಗಳು ಇರುತ್ತವೆ ಮತ್ತು ತಲೆದೋರುತ್ತವೆ ಎಂಬುದನ್ನು ನೆನಪಿಡಿ. 

2. ಲೈವ್ ಕಮ್ಯುನಿಕೇಶನ್ – Live Communication

ಲಭ್ಯವಿರುವ ಸಾಧನೆಗಳ ಮೂಲಕ ವ್ಯಾಪಾರ, ಸೇವೆ ಅಥವಾ ಇನ್ನಾವುದೋ ವಿಷಯದ ಬಗ್ಗೆ ಜಗತ್ತಿನ ಪ್ರೇಕ್ಷಕರೊಂದಿಗೆ ನೈಜ ಸಂವಹನ ಮಾಡಬಹುದು. ಸಾಮಾಜಿಕ ಮಾಧ್ಯಮಗಳ ಮೂಲಕ ಅಥವಾ ಇಮೇಲ್ ಮಾರ್ಕೆಟಿಂಗ್ ಮೂಲಕ ಗ್ರಾಹಕರ ವಿಚಾರಣೆಗೆ ತಕ್ಷಣದ ಪ್ರಕ್ರಿಯೆಯಾಗಿದೆ. 

ವ್ಯಾಪಾರದ ಅಥವಾ ಸೇವೆಗಳ ಆಗುಹೋಗುಗಳ ಬಗ್ಗೆ ಇರತಕ್ಕ ಸಲಹೆ, ಸಂದೇಹಗಳನ್ನು ತಕ್ಷಣವೇ ಸರಿಪಡಿಸಲು ಅಥವಾ ಬಗೆಹರಿಸಲು ಪರಿಣಾಮಕಾರಿಯಾಗಿ ಉಪಯೋಗಿಸಲ್ಪಡುತ್ತದೆ. 

ಜಗತ್ತಿನ ಪ್ರೇಕ್ಷಕರೊಂದಿಗೆ ತಕ್ಷಣವೇ ತೊಡಗಿಸಿಕೊಳ್ಳಲು ಡಿಜಿಟಲ್ ಮಾರುಕಟ್ಟೆ ಅನುಕೂಲವಾಗಿದೆ. ವ್ಯಾಪಾರ ಮತ್ತು ಸೇವೆಗಳಿಗೆ ಸಂಬಂಧಿಸಿದ ವಿಷಯ ಮಂಡನೆ, ಪ್ರಶ್ನೆಗಳನ್ನು ಕೇಳಲು, ಜನಗಳಿಂದ ಸಲಹೆ ಸೂಚನೆಯನ್ನು ಪಡೆಯಲು ತುಂಬಾ ಯೋಗ್ಯವಾಗಿದೆ.

ಸಂಭಾವ್ಯ ಗ್ರಾಹಕರೊಂದಿಗೆ ನೈಜ ಸಮಯದಲ್ಲಿ ಚರ್ಚಿಸಲು ಮತ್ತು ಉಪಸ್ಥಿತಿಯನ್ನು ಕಾಯ್ದುಕೊಳ್ಳಲು ಅನುಕೂಲ ಸಾಧನ. ಕ್ಯಾಟ್ ಪಾರ್ಟ್ ಗಳ ಮೂಲಕ ವಿಡಿಯೋ ಕಾನ್ಫರೆನ್ಸ್ ಮೂಲಕ ಧ್ವನಿಯ ಕರೆಗಳ ಮೂಲಕ ಪ್ರತಿಕ್ರಿಯೆಗಳನ್ನು ನೀಡಲು ಡಿಜಿಟಲ್ ಮಾರ್ಕೆಟಿಂಗ್ ಡಿಜಿಟಲ್ ಲೋಕಕ್ಕೆ ಕೊಡುಗೆಯಾಗಿದೆ. 

3. ಲೆಕ್ಕಿಸಬಹುದಾದ ಫಲಿತಾಂಶ – Calculable Outcome

ನಿಮ್ಮ ಅಭಿಯಾನದ ಅಂಕಿ ಅಂಶಗಳನ್ನು ನೈಜ ಸಮಯದಲ್ಲಿ ಪರಿಶೀಲಿಸಬಹುದು.  ಬ್ಲಾಗ್/ವೆಬ್ಸೈಟ್ ನ ಟ್ರಾಫಿಕ್, ಜಾಹೀರಾತಿನ ಕಾರ್ಯಕ್ಷಮತೆ, ಪರಿವರ್ತನೆ ದರಗಳು, ಪ್ರೇಕ್ಷಕರ ತೊಡಗಿಸಿಕೊಳ್ಳುವಿಕೆ ಮತ್ತು ಇನ್ನಿತರ ಅಂಕಿ ಅಂಶಗಳನ್ನು ಅಂದಾಜಿಸಲು ಅನುವು ಮಾಡಿಕೊಡುತ್ತದೆ.

ವ್ಯಾಪಾರ ಸೇವೆ ಜಾಹೀರಾತು ಮತ್ತು ಹೂಡಿಕೆಯಂತಹ ವಿವಿಧ ಅಂಶಗಳ ಅಂಕಿ ಅಂಶಗಳನ್ನು ಅಂದಾಜಿಸಲು ಉಪಯೋಗವಾಗಿದೆ. ವಿವಿಧ ಕಾರ್ಯಕ್ರಮಗಳ ದತ್ತಾಂಶವನ್ನು ಟ್ರ್ಯಾಕ್ ಮಾಡಬಹುದು. 

ಉದಾಹರಣೆಗೆ, ನಿಮ್ಮ ಬ್ಲಾಗ್/ವೆಬ್ಸೈಟ್ ಗೆ ಎಷ್ಟು ಜನ ಬಂದು ಹೋಗಿದ್ದಾರೆ, ಯಾವ ಯಾವ ದೇಶಗಳಿಂದ ಬಂದಿದ್ದಾರೆ ಎಂಬೆಲ್ಲಾ ಮಾಹಿತಿಯನ್ನು Google Analytics ನಲ್ಲಿ ಟ್ರ್ಯಾಕ್ ಮಾಡಬಹುದು. ಒಂದು ಮಾರಾಟ ಉತ್ಪನ್ನದ ಮೇಲೆ ಜಾಹೀರಾತು ಮಾಡಿದಾಗ, ನಿಮ್ಮ ಜಾಹೀರಾತನ್ನು ಎಷ್ಟು ಜನರು ಕ್ಲಿಕ್ ಮಾಡಿದ್ದಾರೆ, ಎಷ್ಟು ಜನರು ಖರೀದಿ ಮಾಡಿದ್ದಾರೆ ಎಂಬ ಮಾಹಿತಿಯನ್ನು ನೈಜ ಸಮಯದಲ್ಲಿ ತಿಳಿಯಬಹುದು. 

4. ವೆಚ್ಚ ಪರಿಣಾಮಕಾರಿ – Cost Efficient

ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಹಣವನ್ನು ಹೆಚ್ಚು ವ್ಯಯ ಮಾಡದೆ, ಉತ್ತಮ ಕಾರ್ಯಸಾಧ್ಯ ಫಲಿತಾಂಶಗಳನ್ನು ಹೊಂದುವಂತೆ ಸಹಕಾರಿಯಾಗಿದೆ. ಉತ್ಪನ್ನಗಳ, ಸೇವೆಗಳ ಮೇಲಿನ ಜಾಹೀರಾತಿನ ವೆಚ್ಚ ಕಡಿಮೆ ಮಾಡಿ ನಿಖರ ಫಲಿತಾಂಶಗಳನ್ನು ಟ್ರ್ಯಾಕ್ ಮಾಡಲು ಡಿಜಿಟಲ್ ಮಾರ್ಕೆಟಿಂಗ್ ಉಪಯೋಗವಾಗಿದೆ. 

ಆಫ್ ಲೈನ್ ಜಾಹೀರಾತುಗಳಿಗಿಂತ ಆನ್ಲೈನ್ ಜಾಹಿರಾತು ಕಡಿಮೆ ವೆಚ್ಚ ಮತ್ತು ನಿರ್ದಿಷ್ಟ ಸ್ಥಳ, ನಿರ್ದಿಷ್ಟ ಜನರಿಗೆ ತಲುಪುವಲ್ಲಿ ಡಿಜಿಟಲ್ ಮಾರ್ಕೆಟಿಂಗ್ ತುಂಬಾ ಉಪಯೋಗವಾಗಿದೆ. 

ನಿರ್ದಿಷ್ಟ ಸ್ಥಳ, ನಿರ್ದಿಷ್ಟ ಜನರನ್ನು ನಿರ್ದಿಷ್ಟ ಗುರಿ ಉದ್ದೇಶದೊಂದಿಗೆ ತಲುಪಲು ಜಾಹೀರಾತಿನ ಅಭಿಯಾನವನ್ನು ಪರಿಣಾಮಕಾರಿಯಾಗಿ ತೊಡಗಿಸಲು ಡಿಜಿಟಲ್ ಮಾರ್ಕೆಟಿಂಗ್ ಎಂಬುದು ವಿಶ್ವ ಸಾಧನವಾಗಿದೆ. ಅಧಿಕ ಅವೈಜ್ಞಾನಿಕ ಜಾಹೀರಾತು ವೆಚ್ಚಗಳಿಗೆ ಕಡಿವಾಣ ಹಾಕಿ, ನೇರ ಮತ್ತು ಸುಗಮವಾದ ಜಾಹೀರಾತಿನ ವಿಧಾನಗಳಿಗೆ ಪ್ರೋತ್ಸಾಹಿಸುತ್ತದೆ. 

5. ಬ್ರಾಂಡ್ ಗುರುತಿಸುವಿಕೆ ಮತ್ತು ಹರಿವು – Brand Recognition and Awareness

ಡಿಜಿಟಲ್ ಮಾರ್ಕೆಟಿಂಗ್ ಉಪಯೋಗಗಳಲ್ಲಿ ಪ್ರಮುಖ ಉಪಯೋಗ ಏನಂದರೆ, ಬ್ರಾಂಡ್ ನ ಬಗ್ಗೆ ಜಾಗೃತಿ ಮೂಡಿಸುವುದು, ಗ್ರಾಹಕರಲ್ಲಿ ಬ್ರಾಂಡ್ ತಿಳುವಳಿಕೆಯನ್ನು ಹೆಚ್ಚಿಸುವುದು. ಮಾರುಕಟ್ಟೆಯಲ್ಲಿ ಒಂದು ಉತ್ಪನ್ನವನ್ನು ಗ್ರಾಹಕರು ದೀರ್ಘಕಾಲದವರಿಗೆ ನೆನಪಿಟ್ಟುಕೊಳ್ಳಬೇಕಾದರೆ, ಜಾಹೀರಾತುಗಳ ಮೂಲಕ ಬ್ರಾಂಡ್ ಅವರ್ನೆಸ್ ಮೂಡಿಸಬೇಕು. ಇದು ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಮಾತ್ರ ಸುಲಭ ಸಾಧ್ಯ.

ಒಂದು ಉತ್ಪನ್ನ ಅಥವಾ ಸೇವೆ ಮಾರುಕಟ್ಟೆಯಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದಾರೆ ಅದರ ಮೇಲೆ ಜನರ ವಿಶ್ವಾಸ ಹೆಚ್ಚಾಗುತ್ತದೆ ಮತ್ತು ದೀರ್ಘಕಾಲದವರೆಗೆ ಆ ಬ್ರಾಂಡನ್ನು ನೆನಪು  ಇಟ್ಟುಕೊಳ್ಳುಲು ಸಾಧ್ಯವಾಗುತ್ತದೆ. 

 Maaza, Thums Up ನಂತಹ ಬ್ರಾಂಡ್ ಕಂಪನಿಗಳು ಮಾರುಕಟ್ಟೆಯಲ್ಲಿ ಇನ್ನೂ ವಿಶ್ವಾಸವನ್ನು ಉಳಿಸಿಕೊಳ್ಳಬೇಕಾದರೆ ಡಿಜಿಟಲ್ ಮಾರ್ಕೆಟಿಂಗ್ ನ ಪ್ರಮುಖ ಕೊಡುಗೆಯಾಗಿರುತ್ತದೆ. ಹಾಗಾಗಿ ಗ್ರಾಂಡ್ ನ ಬಗ್ಗೆ ಜಾಗೃತಿ ಮೂಡಿಸಲು ಡಿಜಿಟಲ್ ಮಾರ್ಕೆಟಿಂಗ್ ಒಂದು ವರದಾನವಾಗಿದೆ. 

6. ಪರಿವರ್ತನೆ ದರ ಏರಿಕೆ – Increased Conversation Rate

ಪರಿವರ್ತನೆ ದರ ಎಂದರೆ ನಿರ್ದಿಷ್ಟ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡು ಉತ್ಪನ್ನ, ಸೇವೆ ಬಳಸಲು ಪ್ರಯತ್ನಿಸುವಂತೆ ಅಥವಾ ಬ್ಲಾಕ್ ವೆಬ್ಸೈಟ್ ಬಂದು ಸೇರುವಂತೆ ಜಾಹೀರಾತು ಪ್ರಚಾರಗಳನ್ನು ಪರಿಣಾಮಕಾರಿಯಾಗಿಸುವುದು. ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಉತ್ತಮ ಪರಿವರ್ತನ ದರವನ್ನು ಕಾಣಬಹುದು. 

ಇದಕ್ಕೆ ಬೇಕಾದ ಕಾರ್ಯತಂತ್ರಗಳನ್ನು ರೂಪಿಸಲು ಪರಿಣಾಮಕಾರಿಯಾಗಿ ಮಾಡಲು ಡಿಜಿಟಲ್ ಮಾರ್ಕೆಟಿಂಗ್ ಅನು ಮಾಡಿಕೊಡುತ್ತದೆ. ಸರ್ಚ್ ಎಂಜಿನ್ ಆಪ್ಟಿಮೈಸೇಶನ್ ಮೂಲಕ ನಿರ್ದಿಷ್ಟ ಜನರಿಗೆ ತಲುಪಿಸುವಂತೆ ಕಾರ್ಯಕ್ರಮಗಳನ್ನು ರೂಪಿಸಲು ಡಿಜಿಟಲ್ ಮಾರ್ಕೆಟಿಂಗ್ ಸಹಾಯವಾಗುತ್ತದೆ.

ಯಾವುದೇ ಭಾಗದ ಪ್ರೇಕ್ಷಕರು ಬ್ಲಾಗ್ ಅಥವಾ ವೆಬ್ಸೈಟ್, ಉತ್ಪನ್ನ ಅಥವಾ ಸೇವೆ ಲಾಭವನ್ನು ಪಡೆದು ಕೊಂಡಾಗ ಪರಿವರ್ತನಾ ದರಗಳು ಏರಿಕೆಯಾಗುತ್ತದೆ. ವ್ಯಾಪಾರ ಅಥವಾ ಸೇವೆಗಳ ಪರಿವರ್ತನ ದರಗಳನ್ನು ಸುಧಾರಿಸಲು ಇದು ಸಹಾಯ ಮಾಡುತ್ತದೆ. 

ಜಾಹೀರಾತುಗಳು,  ಇ-ಮೇಲ್ ಮಾರ್ಕೆಟಿಂಗ್, ಮತ್ತು ಇನ್ನಿತರ ಡಿಜಿಟಲ್ ಮಾರ್ಕೆಟಿಂಗ್ ತಂತ್ರಗಳ ಮೂಲಕ ಮುನ್ನಡೆ ಸಾಧಿಸಬಹುದು.

7. ವೈಯಕ್ತೀಕರಣ – Personalization

ಡಿಜಿಟಲ್ ಮಾರ್ಕೆಟಿಂಗ್ ನ ವೈಯಕ್ತಿಕರಣವು ಹೆಚ್ಚು ಉಪಯೋಗಕಾರಿಯಾಗಿ ಬೆಳೆಯುತ್ತಿದೆ. ಜಾಗತಿಕ ಮಟ್ಟದಲ್ಲಿ ಪ್ರೇಕ್ಷಕರೊಂದಿಗೆ ತೊಡಗಿಸಿಕೊಳ್ಳಲು ಅಥವಾ ಸಂಪರ್ಕ ಸಾಧಿಸಲು ಪ್ರಮುಖವಾಗಿದೆ. ಜಗತ್ತಿನ ಪ್ರೇಕ್ಷಕರೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸಲು ಸಾಧ್ಯವಾಗುತ್ತದೆ.

ಗ್ರಾಹಕರ ಅಗತ್ಯ, ಆದ್ಯತೆ ಮತ್ತು ಆಸಕ್ತಿಗಳನ್ನು ತಿಳಿದುಕೊಳ್ಳುವುದು ಮತ್ತು ಪೂರೈಸಲು ಅನುವು ಮಾಡಿಕೊಡುತ್ತದೆ. ಲಭ್ಯವಿರುವ ಕೆಲವು ಸಂಪನ್ಮೂಲಗಳು ಗ್ರಾಹಕರ ಕೆಲಸದ ಅಗತ್ಯಗಳನ್ನು ಬಯಕೆಗಳನ್ನು ಎತ್ತಿ ತೋರಿಸುತ್ತವೆ. ಇದರಿಂದಾಗಿ ಅವರ ಜೊತೆ ನಿಕಟ ಸಂಬಂಧವನ್ನು ಹೊಂದಲು ಇದು ಅನುಕೂಲವಾಗುತ್ತದೆ.

ಒಂದು ಉತ್ಪನ್ನ, ಸೇವೆ, ವೆಬ್ಸೈಟ್ ಅನ್ನು ಸುಧಾರಿಸಲು ಗ್ರಾಹಕರನ್ನು ತೊಡಗಿಸಿಕೊಳ್ಳಲು ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ವೈಯಕ್ತೀಕರಣ ಬಳಸಲು ಅನುಕೂಲವಾಗಿದೆ. ಗ್ರಾಹಕರ ಹುಡುಕುತ್ತಿರುವ ಮಾಹಿತಿಯನ್ನು ನೈಜ ಸಮಯದಲ್ಲಿ ತಲುಪಲು ಇದನ್ನು ಬಳಸಬಹುದು.

8. ಸಮೀಪಿಸುವಿಕೆ – Approachability 

ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಮತ್ತೊಂದು ಪ್ರಮುಖ ಉಪಯೋಗವೇನೆಂದರೆ, ಪ್ರೇಕ್ಷಕರನ್ನು ಡಿಜಿಟಲ್ ಜಗತ್ತಿಗೆ ಪ್ರವೇಶಿಸುವುದು ಮತ್ತು ಬ್ರಾಂಡ್ ಗಳ ಬಗ್ಗೆ ಪರಿಚಯಿಸುವುದು. ಯಾವುದೇ ಬ್ರಾಂಡ್, ಉತ್ಪನ್ನ, ಸೇವೆ ಗಳ ಅನುಭವವನ್ನು ಹೊಂದಲು ಡಿಜಿಟಲ್ ಜಗತ್ತಿಗೆ ಪ್ರವೇಶಿಸಲು ಬಹು ಮುಖ್ಯವಾಗಿದೆ.

24/7 ಡಿಜಿಟಲ್ ಮಾರ್ಕೆಟಿಂಗ್ ವ್ಯವಹಾರಗಳು ಪ್ರವೇಶಿಸಲು ಅನುಮತಿ ನೀಡುತ್ತವೆ ಮತ್ತು ತೊಡಗಿಸಿಕೊಳ್ಳಬಹುದು ಮತ್ತು ಬ್ರಾಂಡ್ ಗಳನ್ನು ಖರೀದಿ ಮಾಡಬಹುದು. 

ಬ್ರಾಂಡ್, ಉತ್ಪನ್ನ, ಸೇವೆಯ ಅನುಭವವನ್ನು ಪಡೆಯಲು ಮತ್ತು ವಿಮರ್ಶೆಗಳನ್ನು, ರೇಟಿಂಗ್ಸ್ ಗಳನ್ನು ನೀಡಲು ಇದು ಅನುವು ಮಾಡಿಕೊಡುತ್ತದೆ. ಯಾವುದೇ ಉತ್ಪನ್ನ, ಸೇವೆಯನ್ನು ಪಡೆಯಲು ಖರೀದಿಸಲು ಸುಲಭ ಸಾಧ್ಯ. ಇದಕ್ಕಾಗಿ ಎಲ್ಲಾ ಪೂರ್ವ ಮಾಹಿತಿಯನ್ನು ನೀಡುತ್ತದೆ.

9. ಏರಿಕೆ ROI – Increased ROI 

ಯಾವುದೇ ಉತ್ಪನ್ನ ಅಥವಾ ಸೇವೆಯಲ್ಲಿ ಇಚ್ಛಾಸಕ್ತಿ ಹೊಂದಿರುವ ಪ್ರೇಕ್ಷಕರನ್ನು ಗುರುತಿಸಲು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ದತ್ತಾಂಶವನ್ನು ಸಂಗ್ರಹಿಸಲು ಸಹಾಯಕವಾಗಿದೆ. ಸರಿಯಾದ ಸ್ಥಳದಲ್ಲಿ ಸರಿಯಾದ ಹೂಗಳ ಮೇಲೆ ಹುಡುಗಿಯನ್ನು ಮಾಡಲು ಮತ್ತು ಕಾರ್ಯತಂತ್ರ ರೂಪಿಸಲು ಮುಖ್ಯವಾಗಿದೆ.

ನಿಮ್ಮ ಯಾವ ಉತ್ಪನ್ನವು ಅತಿ ಹೆಚ್ಚು ಗ್ರಾಹಕರನ್ನು ಹೊಂದಿದ್ದರೆ ಅಥವಾ ಆಕರ್ಷಿಸುತ್ತಿದ್ದರೆ ಅದರ ಮೇಲೆ ಇನ್ನೂ ಹೆಚ್ಚಿನ ಪ್ರಯತ್ನಗಳನ್ನು ಮಾಡಲು ಕೇಂದ್ರೀಕರಿಸಬಹುದು.

ಇದರಿಂದಾಗಿ ಹೂಡಿಕೆ ಮೇಲೆ ಅಧಿಕ ಲಾಭವನ್ನು ಪಡೆಯಲು ಸಾಧ್ಯ. ಹೂಡಿಕೆ ಸುಧಾರಣಾ ಕ್ರಮಗಳನ್ನು ಸರಿಪಡಿಸಲು ಡಿಜಿಟಲ್ ಮಾರ್ಕೆಟಿಂಗ್ ತುಂಬಾ ಪ್ರಯೋಜನವಾಗಿದೆ.

10. ನಮ್ಯತೆ – Flexibility 

ಡಿಜಿಟಲ್ ಮಾರ್ಕೆಟಿಂಗ್ ನ ಪ್ರಮುಖ ಉಪಯೋಗವೇನೆಂದರೆ, ನಮ್ಯತೆ ಮತ್ತು ಹೊಂದಾಣಿಕೆ. ಎಲ್ಲಾ ಪರಿಸ್ಥಿತಿ, ವಿಧಾನಗಳಲ್ಲಿ  ಸ್ಪಂದಿಸುವ ಮತ್ತು ಹೊಂದಿಕೊಳ್ಳಬಲ್ಲ ನಮ್ಯತೆಯನ್ನು ಹೊಂದಿದೆ. 

ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಯಾವುದೇ ಕಾರ್ಯ ತಂತ್ರಗಳನ್ನು ರೂಪಿಸಲು ಮತ್ತು ಬದಲಾಯಿಸಲು ಅವಕಾಶ ಮಾಡಿಕೊಡುತ್ತದೆ.  

ಪ್ರೇಕ್ಷಕರ ಬೇಡಿಕೆಗಳು, ಉದ್ಯಮದ ಪ್ರವೃತ್ತಿಗಳು ಪ್ರತಿ ಸ್ಪರ್ಧಿಗಳ ಚಲನಗಳಿಗೆ ನೈಜ ಸಮಯದಲ್ಲಿ ಶೀಘ್ರವಾಗಿ ಪ್ರತಿಕ್ರಿಯಿಸಲು ಅನುವು ಮಾಡಿಕೊಡುತ್ತದೆ.

ಕೊನೆಯ ಮಾತು – Advantages of Digital Marketing in India

ಇಂದು ಡಿಜಿಟಲ್ ಮಾರ್ಕೆಟಿಂಗ್ ಅತಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಜಾಗತಿಕ ಇದರ ಪ್ರಭಾವ ಎಲ್ಲಾ ಕ್ಷೇತ್ರಗಳಲ್ಲೂ ಹಬ್ಬಿದೆ. ಡಿಜಿಟಲ್ ಮಾರ್ಕೆಟಿಂಗ್ ನಿಂದ ತುಂಬಾ ಅನುಕೂಲವಾಗಿದೆ. 

ಡಿಜಿಟಲ್ ಮಾರ್ಕೆಟಿಂಗ್ ಅಲ್ಲಿ ಅನುಕೂಲಗಳು ಇದ್ದಂತೆ ಅನಾನುಕೂಲಗಳೂ ಇವೆ. ಯಾವುದೇ ವ್ಯಾಪಾರ ಉದ್ದಿಮೆಯಲ್ಲಿ ಲಾಭ ಮತ್ತು ನಷ್ಟದ ಭಯ ಸಹಜವಾಗಿ ಇದ್ದೇ ಇರುತ್ತದೆ. 

ಅದರಂತೆ ಇಲ್ಲಿ ಸಹ ಕೆಲವೊಂದು ನ್ಯೂನತೆಗಳು ಸಹ ಇರುತ್ತೆ ಎಂಬುದ ನೆನಪಿಡಿ. ಡಿಜಿಟಲ್ ಮಾರ್ಕೆಟಿಂಗ್ ಕಡೆ ಕಾಲಿಡುವ ಮೊದಲು ಅದರ ಆಳ ಅಗಲವನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. 

ನಿಮ್ಮ ಮಾರುಕಟ್ಟೆ ಯಾವುದೂ ಎಂಬುದನ್ನು ಗುರುತಿಸಬೇಕಾಗಿದೆ, ಮತ್ತು ವೇದಿಕೆಯನ್ನು ಕೂಡ. ನಿಮ್ಮ ಉತ್ಪನ್ನ, ವ್ಯಾಪಾರ ಅಥವಾ ಸೇವೆಯನ್ನು ಆನ್ಲೈನ್ನಲ್ಲಿ ವಿಸ್ತರಿಸುವಾಗ ಡಿಜಿಟಲ್ ಮಾರ್ಕೆಟಿಂಗ್ ನ ಆಳ ಅಗಲವನ್ನು ತಿಳಿಯುವುದು ಉತ್ತಮ. ಸರಿಯಾದ ಸ್ಥಳದಲ್ಲಿ, ಸಮಯದಲ್ಲಿ ಪ್ರೇಕ್ಷಕರನ್ನು ಸಂಪಾದಿಸುವುದು ಬಹಳ ಮುಖ್ಯ. 

ಮುಂದಿನ ಬ್ಲಾಗ್ ಪೋಸ್ಟ್ ನಲ್ಲಿ ಅನಾನುಕೂಲ ಬಗ್ಗೆ ತಿಳಿಯೋಣ. ಕೊನೆಯವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.

Leave a Comment