Digital Marketing in Kannada 2024

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಅತ್ಯಂತ ಗಣನೀಯ ಬೆಳವಣಿಗೆ ಹೊಂದುತ್ತಿದೆ. ಯಾವುದೇ ಕ್ಷೇತ್ರದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಅವಶ್ಯಕತೆ ಇದ್ದೇ ಇರುತ್ತದೆ. ಇದೊಂದು ಇಂಡಸ್ಟ್ರಿಯಾಗಿ ವ್ಯಾಪಕ ಬೆಳವಣಿಗೆಯನ್ನು ಹೊಂದುತ್ತಿದೆ. ಈ ಪೋಸ್ಟ್ ನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ನ ಬಗ್ಗೆ (Digital Marketing in Kannada) ನೋಡೋಣ.

ಡಿಜಿಟಲ್ ಪ್ಲಾಟ್ಫಾರ್ಮ್, ಚಾನೆಲ್ ಮತ್ತು ತಂತ್ರಜ್ಞಾನಗಳ ಮೂಲಕ ನಿರ್ದಿಷ್ಟ ಬಳಕೆದಾರರಿಗೆ ಯಾವುದೇ ಉತ್ಪನ್ನ, ಸೇವೆಯನ್ನು ಜಾಹೀರಾತು ನೀಡುವುದು ಮತ್ತು ಪ್ರಚಾರ ಮಾಡುವುದೇ ಡಿಜಿಟಲ್ ಮಾರ್ಕೆಟಿಂಗ್. 

ಡಿಜಿಟಲ್ ಮಾರ್ಕೆಟಿಂಗ್ ಒಂದು ಬ್ರಾಂಡ್ ನ ಅಂಬಾಸಿಡರ್ ನಂತೆ ವರ್ತಿಸುತ್ತದೆ, ಒಂದು ಪ್ರಚಾರಕರಂತೆ ಕಾರ್ಯ ಮಾಡುತ್ತದೆ.‌ ವಿವಿಧ ರೀತಿಯ ಡಿಜಿಟಲ್ ಸಾಧನಗಳನ್ನು ಬಳಸಿಕೊಂಡು ಜಾಗತಿಕವಾಗಿ ಪ್ರೇಕ್ಷಕರನ್ನು ಹೊಂದಲು ಉಪಯೋಗವಾಗಿದೆ.

ಅನೇಕ ಆನ್ಲೈನ್ ಚಟುವಟಿಕೆಗಳ ಮೂಲಕ ಜಗತ್ತಿನ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸುವುದು. ಬ್ರಾಂಡ್ ನ ಬಗ್ಗೆ ಜಾಗೃತಿ ಮೂಡಿಸುವುದು, ವೆಬ್ಸೈಟಿಗೆ ದಟ್ಟಣೆಯನ್ನು ಹೆಚ್ಚಿಸುವುದು ಮತ್ತು ವ್ಯಾಪಾರ, ಸೇವೆಯನ್ನು ನಿರ್ದಿಷ್ಟ ಗ್ರಾಹಕರಿಗೆ ತಲುಪಿಸುವಂತೆ ಮಾಡುವುದು.

ಡಿಜಿಟಲ್ ಮಾರ್ಕೆಟಿಂಗ್ ಬಂದು ಬಹು ವಿಸ್ತಾರವಾದ ಡಿಜಿಟಲ್ ಲೋಕ. ಜಾಗತಿಕವಾಗಿ ಪರೀಕ್ಷಕರನ್ನು ಗುರುತಿಸಿ, ಅವರ ಬಯಕೆ ಮತ್ತು ಅಗತ್ಯತೆಗಳಿಗೆ ತಕ್ಕಂತೆ ವ್ಯಾಪಾರ ಮತ್ತು ಸೇವೆಯನ್ನು ಒದಗಿಸುವುದು ಡಿಜಿಟಲ್ ಮಾರ್ಕೆಟಿಂಗ್ ತಂತ್ರವಾಗಿದೆ. 

ಸರ್ಚ್ ಎಂಜಿನ್, ಇಮೇಲ್ ಮಾರ್ಕೆಟಿಂಗ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ನಿರ್ದಿಷ್ಟ ಗುರಿ ಉದ್ದೇಶದೊಂದಿಗೆ ಜಾಗತಿಕವಾಗಿ ಸಂಪರ್ಕ ಸಾಧಿಸುವುದು. ಜಾಗತಿಕ ಬಳಕೆದಾರರೊಂದಿಗೆ ಸಂಪರ್ಕ ಸಾಧಿಸುವುದು. 

ಡಿಜಿಟಲ್ ಮಾರ್ಕೆಟಿಂಗ್ ನ ಪ್ರಾಮುಖ್ಯತೆ 2024

ಭಾರತದಂತ ಬೃಹತ್ ಜನಸಂಖ್ಯೆ ಹೊಂದಿರುವ ರಾಷ್ಟ್ರಗಳಲ್ಲಿ ಮೊಬೈಲ್ ಇಂಟರ್ನೆಟ್ ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಬಳಕೆ ಕೂಡ ಹೆಚ್ಚಾಗುತ್ತಿದೆ. ಡಿಜಿಟಲ್ ಮಾರ್ಕೆಟಿಂಗ್ ಪ್ರಾಮುಖ್ಯತೆಗಳನ್ನು ಈ ಕೆಳಗಿನಂತೆ ತಿಳಿಸಲಾಗಿದೆ.

1. ಆನ್ಲೈನ್ ಶಾಪಿಂಗ್ ಭಾರತದಲ್ಲಿ ಗಣನೀಯ ಬೆಳವಣಿಗೆಯನ್ನು ಹೊಂದಲು ಡಿಜಿಟಲ್ ಮಾರ್ಕೆಟಿಂಗ್ ಅಗಾಧ ಕೊಡುಗೆಯನ್ನು ನೀಡಿದೆ. ಮುಕ್ತವಾಗಿ ಮಾರಾಟ ಮಾಡುವ ಮತ್ತು ಜಾಹೀರಾತು ನೀಡುವ ಡಿಜಿಟಲ್ ಮಾರ್ಕೆಟಿಂಗ್ ಪ್ರಮುಖ ಪಾತ್ರವನ್ನು ವಹಿಸುತ್ತದೆ.

2. ಡಿಜಿಟಲ್ ಮಾರ್ಕೆಟಿಂಗ್ ತಂತ್ರಗಳನ್ನು ಮೊಬೈಲ್ ಸ್ನೇಹಿ ಆಗಿರುವಂತೆ ರೂಪಿಸಲಾಗಿದೆ. ಆದ್ದರಿಂದ ಸ್ಮಾರ್ಟ್ ಫೋನ್ ಗಳಲ್ಲಿ ಬಳಕೆದಾರರು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿದೆ.

3. ಯಾವುದೇ ಜಾಗತಿಕ ಅಡೆತಡೆಗಳಿಲ್ಲದೆ ಮುಕ್ತವಾಗಿ ವ್ಯಾಪಾರ ಮಾಡಲು ಡಿಜಿಟಲ್ ಮಾರ್ಕೆಟಿಂಗ್ ಅನುವು ಮಾಡಿಕೊಡುತ್ತದೆ. ಜಾಗತಿಕ ಎಲ್ಲೆಯನ್ನು ಮೀರಿ ವ್ಯವಹರಿಸಬಹುದು. ಯಾವುದೇ ಉತ್ಪನ್ನ ಅಥವಾ ಸೇವೆಯನ್ನು ಜಾಗತಿಕವಾಗಿ ತಲುಪಿಸಲು ಇದು ವಿಶೇಷ ಪ್ರಯೋಜನಕಾರಿಯಾಗಿದೆ.

4. ಬ್ರಾಂಡ್ ಜಾಗೃತಿಯನ್ನು ಮೂಡಿಸಲು, ಬಳಕೆದಾರರೊಂದಿಗೆ ತೊಡಗಿಸಿಕೊಳ್ಳಲು, ಜಾಹಿರಾತು ನೀಡಲು ಮತ್ತು ಪ್ರಚಾರ ಮಾಡಲು ಇದು ವಿಶೇಷ ವೇದಿಕೆಯನ್ನು ಕಲ್ಪಿಸುತ್ತದೆ.

5. ಸಾಂಪ್ರದಾಯಿಕ ಜಾಹೀರಾತು ವಿಧಾನಗಳಿಗಿಂತ ಇದು ಹೆಚ್ಚು ವಿಭಿನ್ನವಾಗಿದೆ ಮತ್ತು ಪರಿಣಾಮಕಾರಿಯಾಗಿದೆ. ಬ್ರಾಂಡ್ ಅಥವಾ ಸೇವೆಯನ್ನು ನಿರ್ದಿಷ್ಟ ಸ್ಥಳ, ಸಮಯ, ಗ್ರಾಹಕರಿಗೆ ತಲುಪುವಂತೆ ಮಾಡಲು ವಿಶಿಷ್ಟ ಪ್ರಯೋಜನಕಾರಿಯಾಗಿದೆ.

6. ಸಣ್ಣ ಸಣ್ಣ ವ್ಯಾಪಾರಗಳಿಗೆ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಸ್ಟಾರ್ಟ್ಅಪ್ ಗಳಿಗೆ ಆಟದ ಮೈದಾನವನ್ನು ರೂಪಿಸುತ್ತದೆ. ಆನ್ಲೈನಲ್ಲಿ ಉಪಸ್ಥಿತಿಯನ್ನು ಕಾಯ್ದುಕೊಳ್ಳಲು ಮತ್ತು ತೊಡಗಿಸಿಕೊಳ್ಳಲು ಅತಿ ಪ್ರಾಮುಖ್ಯವಾಗಿದೆ.

7. ಡಿಜಿಟಲ್ ಮಾರ್ಕೆಟಿಂಗ್ ನೈಜ ಸಮಯದಲ್ಲಿ ನಿಖರವಾದ ಫಲಿತಾಂಶವನ್ನು, ಅಂಕಿ ಅಂಶಗಳನ್ನು ಒದಗಿಸುತ್ತದೆ. 

Digital Marketing Jobs in India in Kannada 2024

ಡಿಜಿಟಲ್ ಮಾರ್ಕೆಟಿಂಗ್ ಯಥೇಚ್ಛವಾಗಿ ಬೆಳೆಯುತ್ತಿರುವ ಒಂದು ಕ್ಷೇತ್ರ. ಜಗತ್ತಿನ ಎಲ್ಲಾ ರಂಗದಲ್ಲಿ ವಿವಿಧ ಪಾತ್ರಗಳಿಗೆ ಬೇಡಿಕೆ ಇದೆ. ಡಿಜಿಟಲ್ ಮಾರ್ಕೆಟಿಂಗ್ ನ ಕೆಲವು ಪ್ರಮುಖ ಉದ್ಯೋಗಗಳು ಈ ಕೆಳಗಿನಂತಿವೆ:

ಡಿಜಿಟಲ್ ಮಾರ್ಕೆಟಿಂಗ್ ಮ್ಯಾನೇಜರ್ -Digital Marketing Manager: ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಮಾರ್ಕೆಟಿಂಗ್ ತಂತ್ರಗಳನ್ನು ರೂಪಿಸುವುದು, ನಿರ್ವಹಿಸುವುದು ಮತ್ತು, ಪ್ರಚಾರಗಳನ್ನು ಮೇಲ್ವಿಚಾರಣೆ ಮಾಡುವುದು. ತಂಡಗಳನ್ನು ನಿರ್ಮಿಸಿ, ನಿರ್ವಹಿಸುವುದು ಅಥವಾ ಮುನ್ನಡೆಸುವುದು.

ಇ-ಮೇಲ್ ಮಾರ್ಕೆಟಿಂಗ್ ಮ್ಯಾನೇಜರ್  Email Marketing Manager: ಇ-ಮೇಲ್ ಮಾರ್ಕೆಟಿಂಗ್ ಎಂದರೆ ಇ-ಮೇಲ್ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಇ-ಮೇಲ್ ಪ್ರಚಾರಗಳನ್ನು ರೂಪಿಸುವುದು ಮತ್ತು ಕಾರ್ಯಗತಗೊಳಿಸುವುದು. ಬಳಕೆದಾರರನ್ನು ಅಥವಾ ಪ್ರೇಕ್ಷಕರನ್ನು ವಿಭಾಗಿಸುವುದು. 

ಡಿಜಿಟಲ್ ಮಾರ್ಕೆಟಿಂಗ್ ಕನ್ಸಲ್ಟೆಂಟ್ -Digital Marketing Consultant: ಯಾವುದೇ ಒಂದು ಕಂಪನಿಗೆ ವಿಷಯ ವಸ್ತುವನ್ನು ರೂಪಿಸುವಲ್ಲಿ, ಕಾರ್ಯತಂತ್ರ ರೂಪಿಸುವಲ್ಲಿ ಇದೊಂದು ಪ್ರಮುಖ ಪಾತ್ರ ವಹಿಸುತ್ತದೆ. ಸಣ್ಣ ಸಣ್ಣ ತಂಡಗಳನ್ನು ನಿರ್ಮಿಸಿ, ಮಾರ್ಕೆಟಿಂಗ್ ತಂತ್ರಗಳನ್ನು ಅಭಿವೃದ್ಧಿಪಡಿಸಲು ಮತ್ತು ಕಾರ್ಯಗತಗೊಳಿಸಲು ಸೂಚಿಸುತ್ತಾರೆ. ಬ್ಲಾಗ್/ವೆಬ್ಸೈಟ್, ಉತ್ಪನ್ನಗಳಿಗೆ ವಿಷಯವನ್ನು ಹೇಗೆ ರಚಿಸಬೇಕು ಎಂಬುದರ ಬಗ್ಗೆ ಸಲಹೆ ಸೂಚನೆ ನೀಡುವುದು.

ಎಸ್ಇಓ ತಜ್ಞ – SEO Specialist: ಮೊದಲು ಕೀವರ್ಡ್ ರಿಸರ್ಚ್ ಗಳನ್ನು ಮಾಡಿ, ಎಸ್ಇಓ ತಂತ್ರಗಳನ್ನು ರೂಪಿಸುವುದು. ಸರ್ಚ್ ಎಂಜಿನ್ ನಲ್ಲಿ ಕಾಣಿಸಲು ಎಸ್ಇಓ ಆಪ್ಟಿಮೈಸೇಶನ್ ಮಾಡುವುದು. ಯಾವುದೇ ಬ್ಲಾಗ್/ವೆಬ್ಸೈಟ್ ಗಳಿಗೆ ಆಪ್ಟಿಮೈಸ್ ಮಾಡುವುದು.

ಕಂಟೆಂಟ್ ಮಾರ್ಕೆಟಿಂಗ್ ಮ್ಯಾನೇಜರ್ – Content Marketing Manager: ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಇದೊಂದು ಪ್ರಮುಖ ಪಾತ್ರವಾಗಿರುತ್ತದೆ. ಸಂಸ್ಥೆ ಒಟ್ಟಾರೆ ಕಾರ್ಯತಂತ್ರಗಳನ್ನು ವಿನ್ಯಾಸಗೊಳಿಸುವುದು ಮತ್ತು ಕಾರ್ಯಗತಗೊಳಿಸುವುದು. ಡಿಜಿಟಲ್ ಮಾರ್ಕೆಟಿಂಗ್ ಗೆ ಬೇಕಾದ ಆಸಕ್ತಿದಾಯಕ ಲೇಖನಗಳನ್ನು ಮತ್ತು ಹೊಸ ವಿಷಯವನ್ನು ಅನ್ವೇಶಿಸುತ್ತಾರೆ. 

ಸೋಶಿಯಲ್ ಮೀಡಿಯಾ ಮ್ಯಾನೇಜರ್ – Social Media Manager: ಡಿಜಿಟಲ್ ಮಾರ್ಕೆಟಿನಲ್ಲಿ ಸೋಶಿಯಲ್ ಮೀಡಿಯಾ ಮ್ಯಾನೇಜರ್ ಎಂದರೆ ಸೋಶಿಯಲ್ ಮೀಡಿಯಾ ಅಕೌಂಟ್ಸ್ ಅಥವಾ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸುವುದು. ಮತ್ತು ಅವುಗಳಿಗೆ ಬೇಕಾದ ವಿಷಯ ವಸ್ತುವನ್ನು ರಚಿಸುವುದು. ಸೋಶಿಯಲ್ ಮೀಡಿಯಾ ತಂತ್ರಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಕಾರ್ಯಾಚರಣೆ ಮಾಡುವುದು.

ಇ-ಕಾಮರ್ಸ್ ಮ್ಯಾನೇಜರ್ – E-Commerce Manager: ಈ ಕಾಮರ್ಸ್ ಮಾರ್ಕೆಟಿಂಗ್, ಪ್ರಾಡಕ್ಟ್ ಅಥವಾ ಉತ್ಪನ್ನ ಪಟ್ಟಿ, ಜಾಹೀರಾತು ಮತ್ತು ಪ್ರಚಾರ ಇವುಗಳನ್ನು ಒಳಗೊಂಡಿರುತ್ತದೆ.‌ ಆನ್ಲೈನ್ ಶಾಪಿಂಗ್ ಫ್ಲಾಟ್ ಫಾರ್ಮಗಳಿಗೆ ಮಾರ್ಕೆಟಿಂಗ್ ತಂತ್ರಗಳನ್ನು ರೂಪಿಸುವುದು.‌ ಇ ಕಾಮರ್ಸ್ ಮಾರ್ಕೆಟಿಂಗ್ ತಂತ್ರಗಳನ್ನು ರಚಿಸುವುದು ಮತ್ತು ಕಾರ್ಯಗತಗೊಳಿಸುವುದು.

ಅಫಿಲಿಯೇಟ್ ಮಾರ್ಕೆಟಿಂಗ್ ಮ್ಯಾನೇಜರ್ – Affiliate Marketing Manager: ಡಿಜಿಟಲ್ ಮಾರ್ಕೆಟಿನಲ್ಲಿ ಇದು ಅತ್ಯಂತ ಪಾತ್ರ ವಹಿಸುತ್ತದೆ. ಯಾವುದೇ ಒಂದು ಸಂಸ್ಥೆಯ ಉತ್ಪನ್ನ ಅಥವಾ ಸೇವೆಯನ್ನು ಉತ್ತೇಜಿಸುವುದು ಮತ್ತು ಪ್ರಚಾರ ಮಾಡುವುದು.‌ ಒಂದು ಸಂಸ್ಥೆಯ ಪರವಾಗಿ ಅವರ ಉತ್ಪನ್ನ ಅಥವಾ ಸೇವೆಯನ್ನು ಮಾರ್ಕೆಟಿಂಗ್ ಮಾಡುವುದು.

ಅನಲಿಟಿಕ್ಸ್ ಮ್ಯಾನೇಜರ್ -Analytics Manager: ಕಾರ್ಯಗತಗೊಳಿಸಿದ ಮಾರ್ಕೆಟಿಂಗ್ ಪ್ರಚಾರಗಳಿಂದ ದತ್ತಾಂಶವನ್ನು ಟ್ರ್ಯಾಕ್ ಮಾಡುವುದು. ಡಿಜಿಟಲ್ ಮಾರ್ಕೆಟಿಂಗ್ ಪ್ರಚಾರಗಳಿಗೆ ದತ್ತಾಂಶವನ್ನು ವಿಶ್ಲೇಷಿಸುವುದು. ಡಿಜಿಟಲ್ ಮಾರ್ಕೆಟಿನಲ್ಲಿ ಕಚ್ಚಾ ದತ್ತಾಂಶಗಳನ್ನು ಅಗತ್ಯ ವಿಷಯ ವಸ್ತುಗಳಾಗಿ ಪರಿವರ್ತಿಸುವುದು, ಕಾರ್ಯಗತಗೊಳಿಸುವುದು ಮತ್ತು ನಿರ್ಧಾರ ತೆಗೆದುಕೊಳ್ಳುವುದು.

ಹೊಸ ಹೊಸ ಉದ್ಯಮಗಳು, ಸೇವೆಗಳು, ಆವಿಷ್ಕಾರಗಳು ಸೃಷ್ಟಿಯಾಗುತ್ತಿದ್ದಂತೆ ಡಿಜಿಟಲ್ ಮಾರುಕಟ್ಟೆಯಲ್ಲಿ ಬೇಡಿಕೆಗಳು ಹೆಚ್ಚಾಗುತ್ತಿದೆ. ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. 

Digital Marketing Salary for Freshers in Kannada 2024

ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಸಂಬಳ ಕೆಲವೊಂದು ಅಂಶಗಳ ಮೇಲೆ ಆಧಾರಿತವಾಗಿರುತ್ತದೆ. ಅದು ಕಂಪನಿಯ ಗಾತ್ರ, ಕೌಶಲ್ಯ, ಪರಿಸರ, ಉದ್ಯಮ, ಸ್ಥಳಗಳ ಮೇಲೆ ಅವಲಂಬಿತವಾಗಿರುತ್ತದೆ.‌ ಸಂಬಳ ಅಥವಾ ವೇತನಗಳು ಒಂದೇ ರೀತಿಯಾಗಿರುವುದಿಲ್ಲ ಇದು ಕಾಲಾನಂತರದಲ್ಲಿ ಬದಲಾಗುತ್ತಿರುತ್ತದೆ. ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಬದಲಾವಣೆಯಾದಂತೆ ನೀಡುವ ಸಂಬಳಗಳು ಬದಲಾಗುತ್ತಿರುತ್ತವೆ. 

ಸಾಮಾನ್ಯವಾಗಿ ಕೆಲವು ಡಿಜಿಟಲ್ ಮಾರ್ಕೆಟಿಂಗ್ ಜಾಬ್ ಗಳಿಗೆ ನೀಡಲಾಗುವ ಕೆಲವು ಸಂಬಳ ವೇತನಗಳ ಸಣ್ಣ ನೋಟ ಇಲ್ಲಿದೆ.

1. ಡಿಜಿಟಲ್ ಮಾರ್ಕೆಟಿಂಗ್ ಮ್ಯಾನೇಜರ್: 

  • ಪ್ರವೇಶ ಮಟ್ಟ(ವಾರ್ಷಿಕ): 3,50,000 – 4,50,000
  • ಮಧ್ಯಮ ಹಂತ: 5,50,000 – 9,50,000
  • ಕೊನೆಯ ಹಂತ: 9,00,000 – ಮೇಲೆ

2. ಇ-ಮೇಲ್ ಮಾರ್ಕೆಟಿಂಗ್ ಮ್ಯಾನೇಜರ್: 

  • ಪ್ರವೇಶ ಮಟ್ಟ: 2,40,000 – 4,50,000
  • ಮಧ್ಯಮ ಹಂತ: 4,50,000 – 6,50,000
  • ಕೊನೆಯ ಹಂತ: 600,000 – ಹೆಚ್ಚು

3. ಸೋಶಿಯಲ್ ಮೀಡಿಯಾ ಮ್ಯಾನೇಜರ್:

  • ಪ್ರವೇಶ ಮಟ್ಟ: 2,50,000 – 4.50,000
  • ಮಧ್ಯಮ ಹಂತ: 4,50,000 -7,50,000
  • ಕೊನೆಯ ಹಂತ: 7,50,000 – ಹೆಚ್ಚು

4. ಎಸ್ಇಓ ತಜ್ಞ:

  • ಪ್ರವೇಶ ಮಟ್ಟ: 1,80,000 – 2,80,000
  • ಮಧ್ಯಮ ಹಂತ: 3,00,000 – 4,50,000
  • ಕೊನೆಯ ಹಂತ: 5,00,000 – ಹೆಚ್ಚು

5. ಇ-ಕಾಮರ್ಸ್ ಮ್ಯಾನೇಜರ್: 

  • ಪ್ರವೇಶ ಮಟ್ಟ: 3,00,000 – 4,50,000
  • ಮಧ್ಯಮ ಹಂತ: 5,00,000 – 8,50,000
  • ಕೊನೆಯ ಹಂತ: 9,00,000 – ಹೆಚ್ಚು

6. ಸೋಶಿಯಲ್ ಎಂಜಿನ್ ಎಕ್ಸ್ಪರ್ಟ್:

  • ಪ್ರವೇಶ ಮಟ್ಟ: 2,00,000 – 3,50,000
  • ಮಧ್ಯಮ ಹಂತ: 3,50,000 – 5,00,000
  • ಕೊನೆಯ ಹಂತ: 5,50,000 – ಹೆಚ್ಚು

7. ಅನಲಿಟಿಕ್ಸ್ ಮ್ಯಾನೇಜರ್:

  • ಪ್ರವೇಶ ಮಟ್ಟ:  3,00,000 – 4,50,000
  • ಮಧ್ಯಮ ಹಂತ: 4,50,000 – 6,00,000
  • ಕೊನೆಯ ಹಂತ: 7,00,000 – ಹೆಚ್ಚು

ಮೇಲೆ ತಿಳಿಸಿದಂತೆ ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ವೇತನ ಶ್ರೇಣಿಗಳು ಕಂಪನಿ ಗಾತ್ರ, ಕೆಲಸದ ಅನುಭವ, ಭೌಗೋಳಿಕ ಆಧಾರದ ಮೇಲೆ ನೀಡಲಾಗುತ್ತದೆ. ಮತ್ತು ಕಾಲದಿಂದ ಕಾಲಕ್ಕೆ ವೇತನ ಶ್ರೇಣಿಗಳು ಬದಲಾಗುತ್ತಿರುತ್ತವೆ. ಇಂದು ಡಿಜಿಟಲ್ ಮಾರ್ಕೆಟಿಂಗ್ ಅನೇಕ ಪ್ರಯೋಜನಗಳನ್ನು ನೀಡುತ್ತಿದೆ ಮತ್ತು ವೇಗವಾಗಿ ಬೆಳೆಯುತ್ತಿದೆ.

Leave a Comment