Unlucking Freelancing Success: Clients, Importance and Top Platforms

ಎಲ್ಲರಿಗೂ ನಮಸ್ಕಾರಗಳು, ಈ ಬ್ಲಾಗ್ ಪೋಸ್ಟ್ ನಲ್ಲಿ ಫ್ರೀಲ್ಯಾನ್ಸಿಂಗ್ ನಲ್ಲಿ ಕ್ಲೈಂಟ್ಸ್ ಗಳನ್ನ ಹೇಗೆ ಪಡೆಯುವುದು? (How To Get Freelancing Clients) ಎಂಬುವುದರ ಕುರಿತು ನೋಡೋಣ. 

ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಫ್ರೀಲ್ಯಾನ್ಸ್ ಎಂಬುದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಬೆಳೆಯುತ್ತಿರುವ ಜನಸಂಖ್ಯೆದೊಂದಿಗೆ ಫ್ರೀಲ್ಯಾನ್ಸಿಂಗ್ ಕೂಡ ಜನಪ್ರಿಯತೆಯನ್ನು ಗಳಿಸಿದೆ. ಫ್ರೀಲ್ಯಾನ್ಸಿಂಗ್ ಸ್ವತಂತ್ರ ಉದ್ಯೋಗಿಯಾಗಿ ಕೆಲಸ ಮಾಡಲು ಸೂಕ್ತವಾಗಿದೆ.

Freelancing ಸ್ವತಂತ್ರ ಉದ್ಯೋಗಿಯಾಗಿ ವ್ಯವಹರಿಸಲು ಉತ್ತೇಜನ ನೀಡುತ್ತವೆ.‌ ಜಾಗತಿಕವಾಗಿ ಸಂಬಂಧವನ್ನು ಹೊಂದಲು ಇದು ಉತ್ತಮ ವೇದಿಕೆಯಾಗಿ ನಿರ್ವಹಿಸುತ್ತದೆ.

ಸಾಮಾನ್ಯವಾಗಿ ಫ್ರೀಲಾನ್ಸಿಂಗ್ ಎಂಬುದು ಒಂದು ಸಾಗರ ಇದ್ದಂತೆ. ಇದರಲ್ಲಿ ಕೆಲಸಗಳನ್ನು ಪಡೆಯುವವರು ಕೆಲಸಗಳನ್ನು ಕೊಡುವವರು ಯಥೇಚ್ಛವಾಗಿ ವ್ಯವಹರಿಸುತ್ತಾರೆ. ಒಬ್ಬ ವ್ಯಕ್ತಿಯಿಂದ ಅಥವಾ ಕ್ಲೆಂಟ್ ಗಳಿಂದ ಪ್ರಾಜೆಕ್ಟ್ ಗಳನ್ನು ಪಡೆಯುವುದು ಕಷ್ಟವೇ ಸರಿ. 

How to get Freelancing clients in Kannada

How to get Freelancing clients in Kannada

How To More Freelance Clients In 2024 – Full Guide.

ಇತ್ತಿಚಿನ ದಿನಗಳಲ್ಲಿ Freelancing clients ಅಥವಾ ಪ್ರಾಜೆಕ್ಟ್ ಗಳನ್ನು ಪಡೆಯುವುದು ಒಂದು ಸವಾಲಾಗಿದೆ. ಆದರೆ ಕೆಲವೊಂದು ತಂತ್ರಗಳ ಮೂಲಕವಾಗಿ ಫ್ರೀಲ್ಯಾನ್ಸಿಂಗ್ ಕ್ಲೈಂಟ್  ಗಳನ್ನು ಪಡೆಯಬಹುದು. ಜಗತ್ತಿನಾದ್ಯಂತ ಕ್ಲೈಂಟ್ಗಳನ್ನು ಪಡೆಯಲು ಕೆಲವೊಂದು ಅಂಶಗಳು ಈ ಕೆಳಗಿನಂತೆ.

1. ಆನ್ಲೈನ್ ಉಪಸ್ಥಿತಿ ಕಾಯ್ದುಕೊಳ್ಳುವುದು: 

ಫ್ರೀಲ್ಯಾನ್ಸಿಂಗ್ ನಲ್ಲಿ ಕ್ಲೈಂಟ್ ಗಳನ್ನು ಪಡೆಯಲು ಮೊದಲ ಹೆಜ್ಜೆ ಏನೆಂದರೆ ಆನ್ಲೈನ್ ನಲ್ಲಿ ಯಾವಾಗಲೂ ಉಪಸ್ಥಿತಿಯಾಗಿರುವಂತೆ ಇರುವುದು. ಜ್ಞಾನ, ಪರಿಣಿತಿ ಹಿಂದಿನ ಕೆಲಸದ ಅನುಭವವನ್ನು ಎತ್ತಿ ಕಾಣಿಸುವಂತೆ  portfolioವನ್ನು ನಿರ್ಮಿಸುವುದು. 

ಪ್ರಮುಖ ವೇದಿಕೆಗಳಾದ Freelancer, Upwork ಮತ್ತು Fiverr ನಂತಹ ವೇದಿಕೆಗಳಲ್ಲಿ ಸುಂದರವಾಗಿ ಕಾಣುವಂತೆ ಪ್ರೊಫೈಲ್ಗಳನ್ನು ರಚಿಸುವುದು. ಇದರ ಜೊತೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಕೂಡ ಖಾತೆಯನ್ನು ಹೊಂದುವುದು ಎನ್ನುವ ಉತ್ತಮ. 

ನಿಮ್ಮ ಜ್ಞಾನ, ಕೌಶಲ್ಯ ಮತ್ತು ಹಿಂದಿನ ಕೆಲಸದ ಅನುಭವವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಿ. ಇದರಿಂದ ಕ್ಲೈಂಟ್ ಗಳನ್ನು ಪಡೆಯಲು  ಸುಲಭವಾಗುತ್ತದೆ ಮತ್ತು ಕ್ಲೈಂಟ್ ಗಳಿಗೆ ಪ್ರಾಜೆಕ್ಟ್ ಗಳನ್ನು ನೀಡಲು ಹೆಚ್ಚು ಭರವಸೆ ಮೂಡುತ್ತದೆ. 

2. ಕೋಲ್ಡ್ ಇ-ಮೇಲ್ ಗಳನ್ನು ಕಳುಹಿಸಿ:

ಫ್ರೀಲ್ಯಾನ್ಸಿಂಗ್ ನಲ್ಲಿ ಕ್ಲೈಂಟ್ಗಳನ್ನು ಪಡೆಯಲು ಎರಡನೇ ಪ್ರಮುಖ ಅಂಶವೇನೆಂದರೆ, ಕೋಲ್ಡ್ ಇಮೇಲ್‌ಗಳನ್ನು ಕಳುಹಿಸುವುದು. ಹೌದು ಕೋಲ್ಡ್ ಇ-ಮೇಲೆಗಳನ್ನು ಕಳಿಸುವುದರಿಂದ ಸಂಭಾವ್ಯ ಕ್ಲೈಂಟ್ ಗಳ ದೃಷ್ಟಿಗೆ ಫ್ರೀಲ್ಯಾನ್ಸಿಂಗ್ ಕ್ಷೇತ್ರದಲ್ಲಿ ಪರಿಣಿತರಾಗಿ ಕಾಣಬಹುದು. 

ಮ್ಯಾನೇಜರ್ ಗಳು, ಕಂಪನಿ ಎಡಿಟರ್ಗಳು ನಿಮ್ಮನ್ನು ಅಪ್ರೋಚ್ ಆಗಲು ಸಾಧ್ಯವಾಗುತ್ತದೆ. ಕೋಲ್ಡ್ ಇಮೇಲ್ ಗಳಲ್ಲಿ ನಿಮ್ಮ ಹೆಸರು ನಿಮ್ಮ ಜ್ಞಾನ, ಕೌಶಲ್ಯ, ಕೆಲಸದ ಅನುಭವವನ್ನು ಒಳಗೊಂಡಿರುತ್ತದೆ. 

ಇದನ್ನು ಡಿಜಿಟಲ್ ಮಾರ್ಕೆಟಿನಲ್ಲಿ ಕೋಲ್ಡ್ ಪಿಚಿಂಗ್ ಎಂದು ಕರೆಯುತ್ತಾರೆ. ಇದರ ಫಲಿತಾಂಶ ಈಗಲೇ ತೋರಿಸದಿರಬಹುದು, ಆದರೆ ಮುಂದಿನ ದಿನಗಳಲ್ಲಿ ಇದರ ಪರಿಣಾಮ ಖಂಡಿತವಾಗಿಯೂ ಉತ್ತಮವಾಗಿರುತ್ತದೆ.

3. ಶಿಫಾರಸ್ಸು ಮತ್ತು ನೆಟ್ವರ್ಕಿಂಗ್: 

ಫ್ರೀಲ್ಯಾನ್ಸಿಂಗ್ ಕ್ಲೈಂಟ್ಗಳನ್ನು ಪಡೆಯಲು ಮೂರನೇ ಪ್ರಮುಖ ಅಂಶವೇನೆಂದರೆ, ಈಗಾಗಲೇ ನಿಮಗೆ ಪರಿಚಯವಿರುವ ಸ್ನೇಹಿತರು, ಕುಟುಂಬದವರು, ಸಹೋದ್ಯೋಗಿಗಳು ಕ್ಲೆಂಟ್ಗಳೊಂದಿಗೆ ವ್ಯವಹರಿಸುತ್ತಿದ್ದರೆ, ಕ್ಲೈಂಟ್ ಗಳಿಗೆ ನಿಮ್ಮನ್ನು ಶಿಫಾರಸು ಮಾಡುವಂತೆ ತಿಳಿಸಿ. 

ನಿಮ್ಮ ಹತ್ತಿರದವರಲ್ಲಿ ಯಾರಾದರೂ ಕ್ಲೈಂಟ್ ಗಳನ್ನು ಪಡೆದಿದ್ದರೆ, ನಿಮ್ಮ ಬಗ್ಗೆ ತಿಳಿಸುವಂತೆ ಅವರನ್ನು ‌ಸಂಪರ್ಕಿಸಿ. ಮಧು ಇದಕ್ಕೆ ಸಂಬಂಧಿಸಿದ ಯಾವುದೇ ಆನ್ಲೈನ್ ಗ್ರೂಪ್ ಗಳು, ಸಮುದಾಯಗಳಿಗೆ ಸೇರಿ.

Freelancing ಗೆ ಸಂಬಂಧಿಸಿದಂತೆ ವೆಬಿನಾರ್ ಗಳಿಗೆ, ಈವೆಂಟ್ ಗಳಿಗೆ ಮತ್ತು ಇನ್ನಿತರ ಸಮ್ಮೇಳನಗಳಿಗೆ ಹಾಜರಾಗಿರಿ. 

4. ಕಡಿಮೆ ವೆಚ್ಚದ ಸೇವೆಗಳು: 

ಆರಂಭದಲ್ಲಿ ಉಚಿತ ಮತ್ತು ಕಡಿಮೆ ವೆಚ್ಚದ ಸೇವೆಗಳನ್ನು ನೀಡಲು ಪ್ರಯತ್ನಿಸಿರಿ. ಮತ್ತು ನಿಮ್ಮ ಜ್ಞಾನ, ಪರಿಣಿತಿ ಕೌಶಲ್ಯ, ಕೆಲಸದ ಅನುಭವವನ್ನು ಪ್ರಾಮಾಣಿಕವಾಗಿ ಕ್ಲೈಂಟ್ ಗಳಿಗೆ  ತಲುಪಿಸುವಂತೆ portfolioವನ್ನು ನಿರ್ಮಿಸಿ. 

ಕ್ಲೈಂಟ್ಸ್ ಗಳಿಗೆ ನಿಮ್ಮ ಮೇಲೆ ಸಂಪೂರ್ಣ ಭರವಸೆ ಮೂಡುವಂತೆ ಅತ್ಯುತ್ತಮವಾಗಿ ಸೇವೆಯನ್ನು ಒದಗಿಸಿ. ಇದರಿಂದ ದೀರ್ಘಕಾಲದವರೆಗೆ ಉತ್ತಮ ಸಂಬಂಧವನ್ನು ಹೊಂದಲು ಸಾಧ್ಯವಾಗುತ್ತದೆ.

ನಿಮ್ಮ ನಿರ್ದಿಷ್ಟ ಜ್ಞಾನ ಕೌಶಲವನ್ನು ಮಾತ್ರ ನಮೂದಿಸಿ. ಹೆಚ್ಚಿನ ಕ್ಲೈಂಟಿಗಳನ್ನು ಪಡೆಯಲು ನಿಮಗಿರದ ಜ್ಞಾನವನ್ನು ನಮೂದಿಸಬೇಡಿ. ಇದರ ಜೊತೆಗೆ ಹೆಚ್ಚಿನ ಕ್ಲೈಂಟಿಗಳನ್ನು ಸಂತೃಪ್ತಪಡಿಸಲು ಪ್ರಯತ್ನಿಸಬೇಡಿ. ಏಕೆಂದರೆ ಅತಿ ಹೆಚ್ಚಿನ ಕ್ಲೈಂಟ್ಸ್ ಗಳನ್ನು ನಿರ್ವಹಿಸುವುದು ಕಷ್ಟ ಸಾಧ್ಯವಾಗುತ್ತದೆ.‌

Importance of Freelancing in Kannada

ವೇಗವಾಗಿ ವಿಕಸನ ಹೊಂದುತ್ತಿರುವ ಜಗತ್ತಿನಲ್ಲಿ ಫ್ರೀಲ್ಯಾನ್ಸಿಂಗ್ ಒಂದು ಅದ್ಭುತ ಆನ್ ಲೈನ್ ವೇದಿಕೆಯಾಗಿ ಸಾವಿರಾರು ಅವಕಾಶಗಳನ್ನು ಒದಗಿಸುತ್ತಿದೆ. ಯಾವುದೇ ಸಮಯದ ಮಿತಿಯಿಲ್ಲದೆ, ಜಾಗತಿಕ ಗಡಿಗಳ ಸಂಬಂಧವಿಲ್ಲದೆ ಎಲ್ಲಾರೂ ತೊಡಗಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ.

ಫ್ರೀಲ್ಯಾನ್ಸಿಂಗ್ ನ ಮುಖ್ಯ ಉದ್ದೇಶಗಳು ಹೆಚ್ಚು ಸೇವೆಯನ್ನು ಒದಗಿಸಿ, ಹೆಚ್ಚು ಹಣವನ್ನು ಗಳಿಸುವುದು. ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ  Freelancing ಒಂದು ಅತ್ಯುತ್ತಮ ಪಾತ್ರ ವಹಿಸುತ್ತದೆ. ಫ್ರೀಲ್ಯಾನ್ಸಿಂಗ್ ಪ್ರಾಮುಖ್ಯತೆಯನ್ನು ಈ ಕೆಳಗಿನಂತೆ ತಿಳಿಸಲಾಗಿದೆ.

  • ಫ್ರೀಲ್ಯಾನ್ಸಿಂಗ್ ಜಾಗತಿಕ ಮಾರುಕಟ್ಟೆಗೆ ಪ್ರವೇಶಿಸಲು ಅವಕಾಶವನ್ನು ಕಲ್ಪಿಸುತ್ತದೆ ಮತ್ತು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಅನುಮತಿ ನೀಡುತ್ತದೆ.
  • ಜ್ಞಾನ ಕೌಶಲ್ಯ ವನ್ನು ಆನ್ಲೈನಲ್ಲಿ ಮಾರಲು ಅವಕಾಶವನ್ನು ನೀಡುತ್ತಿದೆ.
  • ಜಾಗತಿಕ ಗಡಿಗಳನ್ನು ಮೀರಿ ವ್ಯವಹರಿಸಲು ಸೂಕ್ತ ವೇದಿಕೆಗಳಾಗಿ ಸಹಾಯ ಮಾಡುತ್ತದೆ.
  • ಜಗತ್ತಿನ ಯಾವುದೇ ಜನರು ತಮ್ಮ ಜ್ಞಾನ, ಕೌಶಲ್ಯವನ್ನು ಉಪಯೋಗಿಸಿಕೊಂಡು ಹಣ ಸಂಪಾದನೆ ಮಾಡುವ ದಾರಿಯನ್ನು ರೂಪಿಸುತ್ತದೆ. 
  • ಯಾವುದೇ ಜ್ಞಾನ, ಕೌಶಲ್ಯವನ್ನು ಜಗತ್ತಿನಾದ್ಯಂತ ಮುಕ್ತವಾಗಿ ಅನ್ ಲೈನ್ ನಲ್ಲಿ ಮಾರಾಟ ಮಾಡಬಹುದು.
  • ಎಲ್ಲಿ ಬೇಕಾದರೂ ಮತ್ತು ಯಾವಾಗ ಬೇಕಾದರೂ ಕೆಲಸ ಮಾಡುವ ಸ್ವಾತಂತ್ರ್ಯವನ್ನು ನೀಡುತ್ತದೆ.
  • ಅನೇಕ ವೈವಿಧ್ಯಮಯ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಇದರಿಂದ ಆರ್ಥಿಕವಾಗಿ ಬಲಗೊಳ್ಳಲು ಸಾಧ್ಯವಾಗುತ್ತದೆ.
  • ಹೊಸ ಪ್ರತಿಭೆಗಳನ್ನು ಉತ್ತೇಜಿಸುತ್ತದೆ ಮತ್ತು ಕೆಲಸಕ್ಕೆ ಹೊಂದಿಕೊಳ್ಳುವ ಸಮತೋಲನವನ್ನು ಒಳಗೊಂಡಿದೆ.
  • ಯಾರೊಬ್ಬರ ಕೈ ಕೆಳಗೆ ದುಡಿಯದೆ ಅವರಿಗೆ ಅವರೇ ಬಾಸ್ ಆಗಿರುತ್ತಾರೆ

ಭವಿಷ್ಯವನ್ನು ರೂಪಿಸುವಲ್ಲಿ ಈ ವೇದಿಕೆಗಳು ತುಂಬಾ ಮಹತ್ವದ ಪಾತ್ರವನ್ನು ವಹಿಸುತ್ತವೆ.

Best Freelancing sites in Kannada 2024

ಮನೆಯಿಂದಲೇ ಕುಳಿತುಕೊಂಡು ಕಂಪನಿಗಳಿಗೆ ಕೆಲಸ ಮಾಡಿ ಹಣ ಸಂಪಾದನೆ ಮಾಡಿಕೊಡುವ ಹಲವಾರು ಫ್ರೀಲ್ಯಾನ್ಸಿಂಗ್ ಸೈಟುಗಳಿವೆ. ದಿನಕ್ಕೆ 3-4 ಗಂಟೆಗಳಂತೆ ಕೆಲಸ ಮಾಡಿ ಉತ್ತಮವಾಗಿ ದುಡ್ಡು ಮಾಡಬಹುದು. 

ಲ್ಯಾಪ್ಟಾಪ್ ಇಲ್ಲವೇ ನಿಮ್ಮ ಮೊಬೈಲ್ ಫೋನ್ ಅನ್ನು ಬಳಸಿಕೊಂಡು ಈ ಫ್ರೀಲ್ಯಾನ್ಸಿಂಗ್ ಸೈಟ್ ಗಳ ಮೂಲಕ ಹೆಚ್ಚಿನ ಆದಾಯವನ್ನು ಗಳಿಸಬಹುದು. 

ಈಗಾಗಲೇ ಅಸ್ತಿತ್ವದಲ್ಲಿರುವ ಹಲವಾರು ಫ್ರೀಲ್ಯಾನ್ಸಿಂಗ್ ಸೈಟುಗಳು ಆನ್ಲೈನ್ ನಲ್ಲಿ ಲಭ್ಯವಿವೆ. ಅದರಲ್ಲಿ ಪ್ರಮುಖವಾಗಿ 10 Freelancing site ಗಳ ಹೆಸರನ್ನು ಕೆಳಗೆ ನೀಡಲಾಗಿದೆ. 

Best Freelancing sites in India. 

  1. Fiverr
  2. Upwork
  3. Freelancer
  4. Guru
  5. PeoplePerHour 
  6. TaskRabbit 
  7. Toptal
  8. SimplyHired
  9. DigitalCrowd
  10. 99Design

ಇವುಗಳಲ್ಲದೆ ಆನ್ಲೈನ್ ನಲ್ಲಿ ಇನ್ನು ಸಾಕಷ್ಟು ಸೈಟ್ ಗಳಿಗೆ. ಪ್ರತಿಯೊಂದು ಫ್ರೀಲ್ಯಾನ್ಸಿಂಗ್ ಸೈಟುಗಳು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿರುತ್ತವೆ. ನಿಮ್ಮ ಜ್ಞಾನ ಕೌಶಲ್ಯಕ್ಕೆ ಯಾವ ಪ್ಲಾಟ್ಫಾರ್ಮ್ ಅಥವಾ ಸೈಟು ಹೊಂದಿಕೆ ಆಗುತ್ತಿದೆ ಎಂಬುದನ್ನು ತಿಳಿದುಕೊಂಡು, ಅದರ ಮೂಲಕ ಮುಂದುವರಿಯಬಹುದು.

ಕೊನೆಯ ಮಾತು – Getting Freelancing Clients

ಫ್ರೀಲ್ಯಾನ್ಸಿಂಗ್ ಪ್ರತಿಯೊಬ್ಬರಿಗೆ ತಮ್ಮ ಜೀವನದ ಮೇಲೆ ಹಿಡಿತವನ್ನು ಸಾಧಿಸಲು, ಭಾವೋದ್ರೇಕಗಳನ್ನು ಮುಂದುವರಿಸಲು ಮತ್ತು ಕೆಲಸ ಜೀವನದ ಸಮತೋಲನವನ್ನು ಸಾಧಿಸಲು ಒಂದು ಸುಂದರ ಅವಕಾಶವನ್ನು ಕಲ್ಪಿಸುತ್ತದೆ. 

ಅದರ ಜೊತೆಗೆ ಗ್ರಾಹಕರನ್ನು ಹುಡುಕುವುದು ಮತ್ತು ಅವರನ್ನು ಕೊನೆಯವರೆಗೂ ಉಳಿಸಿಕೊಳ್ಳುವುದು ಒಂದು ಸವಾಲಾಗಿದೆ. ಏಕೆಂದರೆ Freelancing platform ಗಳಲ್ಲಿ ಆನ್ಲೈನ್ ಉಪಸ್ಥಿತಿಯನ್ನು ಕಾಯ್ದುಕೊಳ್ಳುವುದು ನಿರ್ಣಾಯಕ ಹಂತವಾಗಿದೆ. ಪರಿಣತಿಯನ್ನು ಪ್ರದರ್ಶಿಸುವ portfolio ಅನ್ನು ನಿರ್ಮಿಸುವುದು ಮತ್ತು ಗುಣಮಟ್ಟದ ಕೆಲಸವನ್ನು ಮಾಡಿಕೊಳ್ಳುವುದು.

ಫ್ರೀಲಾನ್ಸಿಂಗ್ ಇಂದಿನ ದಿನದಲ್ಲಿ ಒಂದು ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಪ್ರಪಂಚದ ಯಾವ ಮೂಲೆಯಿಂದಾದರೂ ಕೆಲಸ ಮಾಡುವ ನಮ್ಯತೆಯನ್ನು ನೀಡುತ್ತದೆ. ಹೆಚ್ಚುವರಿ ಆದಾಯವನ್ನು ಗಳಿಸಲು ಇದು ಉತ್ತಮ ಮಾರ್ಗವಾಗಿದೆ. ತಮಗೆ ಆಸಕ್ತಿಯಿರುವ ಕೌಶಲ್ಯಗಳ ಮೇಲೆ ಆನ್ಲೈನ್ ಮಾರ್ಕೆಟಿಂಗ್ ಮಾಡಿ ಆದಾಯ ಮೂಲಗಳನ್ನು ಹೆಚ್ಚಿಸಿಕೊಳ್ಳಬಹುದು.

ಇದರಲ್ಲಿ ಕೂಡ ಕೆಲವೊಂದು ಸಾರಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಫ್ರೀಲ್ಯಾನ್ಸಿಂಗ್ ನಲ್ಲಿ ಅನೇಕ ಪ್ರಯೋಜನಗಳು, ಜೀವನದ ಅವಕಾಶಗಳಿದ್ದರೂ ಅನಿಶ್ಚಿತತೆಗಳನ್ನು ಎದುರಿಸಬೇಕಾಗುತ್ತದೆ. ಆದರೂ ಸರಿಯಾದ ವಿಧಾನ ಮತ್ತು ಶ್ರೇಷ್ಠತೆಯ ಭದ್ರತೆಯೊಂದಿಗೆ ಯಶಸ್ವಿ ಫ್ರೀಲ್ಯಾನ್ಸರ್-ಗಳಾಗಿ ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಮುಂದುವರೆಯಬಹುದು.

Leave a Comment