What is Freelancing? And How to Start Freelancing in Kannada 2024

ಎಲ್ಲಾರಿಗೂ ನಮಸ್ಕಾರ, ಈ ಬ್ಲಾಗ್ ಪೋಸ್ಟ್ ನಲ್ಲಿ what is Freelancing? How to start Freelancing without experience ಎಂಬೆಲ್ಲಾ ಮಾಹಿತಿಯನ್ನು ತಿಳಿಯೋಣ.

Freelancing ಎಂದರೆ – ಫ್ರೀಲ್ಯಾನ್ಸ್ ಹೆಸರೇ ಸೂಚಿಸುವಂತೆ ಸ್ವತಂತ್ರ ಉದ್ಯೋಗಿಗಳು ಅಥವಾ ಗುತ್ತಿಗೆದಾರರು ಎಂಬ ಸಾಮಾನ್ಯ ಅರ್ಥವನ್ನು ನೀಡುತ್ತದೆ. ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯಿಂದ ಕೆಲಸಗಳನ್ನು ಪಡೆದು ಸ್ವತಂತ್ರವಾಗಿ ಕೆಲಸ ಮಾಡುತ್ತಾರೆ.

ಒಬ್ಬ ವ್ಯಕ್ತಿ ಅಥವಾ ಸಂಸ್ಥೆಗಳಿಂದ ಪ್ರಾಜೆಕ್ಟ್ ಗಳನ್ನು ಪಡೆದು ನಿರ್ದಿಷ್ಟ ಸಮಯದೊಳಗೆ ಮಾಡಿಕೊಡುತ್ತಾರೆ. ಇದರಲ್ಲಿ ವೇತನ ಸಮಯ ದಿನ ವಾರಗಳ ಆಧಾರದ ಮೇಲೆ ಯೋಜನೆಗಳನ್ನು ಸ್ವೀಕರಿಸುತ್ತಾರೆ. 

Freelancer ಗಳು ಸ್ವಂತ ಗ್ರಾಹಕರನ್ನು ಆಯ್ಕೆ ಮಾಡುವ ನಮ್ಯತೆಯನ್ನು ಹೊಂದಿರುತ್ತಾರೆ.

Freelancer ಎಂದರೆ ಕೆಲಸಗಳನ್ನು ಮಾಡಿಕೊಡುವ ಸ್ವತಂತ್ರ ಉದ್ಯೋಗಿ ಎಂದರ್ಥ. ಕೆಲವೊಂದು ಫ್ರೀಲ್ಯಾನ್ಸಿಂಗ್ ಪ್ಲಾಟ್ಫಾರ್ಮ್ ಗಳನ್ನು ಉಪಯೋಗಿಸಿಕೊಂಡು ಕ್ಲೈಂಟ್ಸ್ ಗಳಿಂದ ಪ್ರಾಜೆಕ್ಟ್ ಗಳನ್ನು ಪಡೆದು ನಿರ್ದಿಷ್ಟ ಸಮಯದೊಳಗೆ ಕೆಲಸಗಳನ್ನು ಮಾಡಿಕೊಡುವ ವ್ಯಕ್ತಿಯಾಗಿರುತ್ತಾನೆ.

 Clients ಎಂದರೆ, ಉದ್ಯೋಗದಾತನು ಅಥವಾ ಒಂದು ಸಂಸ್ಥೆ, ಒಂದು ಕಂಪನಿಯ ಪರವಾಗಿ ಉದ್ಯೋಗವನ್ನು ಅಥವಾ ಪ್ರಾಜೆಕ್ಟ್ ಗಳನ್ನು ನೀಡುವ ವ್ಯಕ್ತಿಯಾಗಿರುತ್ತಾನೆ. ಪ್ರತಿಯೊಂದು ಕಂಪನಿಯು ತನಗೆ ಬೇಕಾದ ಅಗತ್ಯವಿರುವ ಕೆಲಸಗಳನ್ನು ಫ್ರೀಲಾನ್ಸರ್ ಗಳಿಂದ ಮಾಡಿಸಿಕೊಳ್ಳುತ್ತಾರೆ. ನಿರ್ದಿಷ್ಟ ಕೆಲಸಕ್ಕೆ ಒಂದು ಮೊತ್ತ ಹಣವನ್ನು ನೀಡುತ್ತಾರೆ.

Freelancing Meaning in Kannada 2024.

ಸಾಮಾನ್ಯವಾಗಿ ಫ್ರೀಲ್ಯಾನ್ಸಿಂಗ್ ನಲ್ಲಿ ಫ್ರೀಲಾನ್ಸರ್ ಮತ್ತು ಕ್ಲೈಂಟ್ ನಡುವಿನ ಸಂಬಂಧವು ಒಪ್ಪಂದವನ್ನು ಆದರಿಸಿದೆ. ಇಲ್ಲಿ ಅವಶ್ಯಕತೆಗಣುಗುಣವಾಗಿ ವ್ಯವಹಾರ ನಡೆಯುತ್ತದೆ. ಇಲ್ಲಿ ಪ್ರಪಂಚದಾದ್ಯಂತ ಯಾರಿಗೆ ಬೇಕಾದರೂ ತಮ್ಮ ಕೌಶಲ್ಯವನ್ನು ಮಾರಬಹುದು ಯಾರು ಬೇಕಾದರೂ ತಮ್ಮ ಕೆಲಸವನ್ನು ನೀಡಬಹುದು.

Freelancer, Fiverr ಮತ್ತು Up work ನಂತಹ ಜನಪ್ರಿಯ ಆನ್ಲೈನ್ ವೇದಿಕೆಗಳು Freelancer ಮತ್ತು  Clients ಗಳ ನಡುವೆ ಪ್ರಾಪಂಚಿಕವಾಗಿ ಸಂಬಂಧವನ್ನು ಏರ್ಪಡಿಸುತ್ತವೆ. ಇನ್ನೊಂದು ರೀತಿಯಲ್ಲಿ ಉದ್ಯೋಗ ನೀಡುವರು ಉದ್ಯೋಗ ಪಡೆಯುವರು ಬಂದು ಸೇರುವ ಆನ್ಲೈನ್ ವೇದಿಕೆಯಾಗಿದೆ. 

ಜಾಗತಿಕ ಗಡಿಗಳನ್ನು ದಾಟಿ ತಮ್ಮ ಕೌಶಲ್ಯಗಳನ್ನು ಸಾಮರ್ಥ್ಯಗಳನ್ನು ತೋರಿಸಬಹುದಾಗಿದೆ. ಲಭ್ಯವಿರುವ ಕೆಲವೊಂದು ಸಂಪನ್ಮೂಲಗಳನ್ನು ಬಳಸಿಕೊಂಡು ನಮ್ಮ ಸ್ಕಿಲ್ಸ್ ಗಳನ್ನು, ನಮ್ಮ ಜ್ಞಾನವನ್ನು ಆನ್ಲೈನ್ ಮಾರುಕಟ್ಟೆಯಲ್ಲಿ  ಉಪಸ್ಥಿತಿ ಪಡಿಸಿಕೊಳ್ಳಲು ಉತ್ತಮ ವೇದಿಕೆಗಳಾಗಿವೆ. 

ಯಾವುದೇ ಕಾಲಮಿತಿ ಇಲ್ಲದೆ ನಮ್ಮ ಅನುಕೂಲ ಸಮಯದಲ್ಲಿ, ಸ್ಥಳದಲ್ಲಿ ಜಗತ್ತಿನಾದ್ಯಂತ ಅಗತ್ಯವಿರುವವರಿಗೆ ಕೆಲಸ ಮಾಡಿಕೊಡಬಹುದಾಗಿದೆ. ಜಗತ್ತಿನ ಕ್ಲೈಂಟ್ಸ್ ಗಳೊಂದಿಗೆ ಸ್ವತಂತ್ರವಾಗಿ ಸಂಪರ್ಕಿಸಲು, ಬೆಳೆಯಲು ಅನುಕೂಲ ಮಾಡಿಕೊಡುತ್ತದೆ.

The Simple Guide: How To Start A Freelancing in Kannada

How to do freelancing in india 2024

How To Start Freelancing In India 2024.

Freelancing ಅನ್ನು ಯಾರಾದರೂ ಮಾಡಬಹುದು ಮತ್ತು ಜಗತ್ತಿನ ಯಾವ ಮೂಲೆಯಿಂದ ಆದರೂ ಮಾಡಬಹುದು. ಫ್ರೀಲಾನ್ಸಿಂಗ್ ಹೇಗೆ ಮಾಡಬೇಕು ಎನ್ನುವವರಿಗೆ ಕೆಲವೊಂದು ಅಂಶಗಳು ಇಲ್ಲಿವೆ. 

1. ನಿಮ್ಮ ಕೌಶಲ್ಯವನ್ನು ಗುರುತಿಸಿ (Identify Your Skills):

ಮೊದಲು ನಿಮ್ಮ ಸ್ಕಿಲ್ ಏನು ಎಂಬುದನ್ನು ಗುರುತಿಸಿ, ನಂತರ ಅದನ್ನು ಇಂಪ್ಲಿಮೆಂಟ್ ಮಾಡಿ. ಫ್ರೀಲ್ಯಾನ್ಸಿಂಗ್ ನಲ್ಲಿ ಯಶಸ್ವಿಯಾಗಿ ಮುಂದುವರಿಯಬೇಕಾದರೆ ಯಾವುದಾದರೂ ಒಂದು ಸ್ಕಿಲ್ ನಲ್ಲಿ ಅಥವಾ ಕೌಶಲ್ಯದಲ್ಲಿ ಪರಿಣತಿಯನ್ನು ಹೊಂದಿರಬೇಕು. 

ಒಂದು ವೇಳೆ ನಿಮ್ಮ ಹತ್ತಿರ ಯಾವುದೇ ಸ್ಕಿಲ್ ಇಲ್ಲದಿದ್ದರೆ ಈಗಾಗಲೇ ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಹಲವಾರು ಅಂಶಗಳು ಅಥವಾ ಘಟಕಗಳಿವೆ ಅದರಲ್ಲಿ ನಿಮಗೆ ಇಷ್ಟವಾದ ಒಂದು ಕೌಶಲ್ಯವನ್ನು ಕಲಿಯಿರಿ. ಅದರಲ್ಲಿ ಸ್ವತಂತ್ರವಾಗಿ ನೀವು ನೀಡಬಹುದಾದ ಒಂದು ನಿರ್ಧರಸಿ.

2. ನಿಮ್ಮದೇ ಆದ Portfolio ಅನ್ನು ರಚಿಸಿ:

ನಿಮ್ಮ ಉತ್ತಮ ಕೆಲಸವನ್ನು ಪ್ರದರ್ಶಿಸುವ ಅಥವಾ ಎತ್ತಿ ತೋರಿಸುವ portfolio ರಚಿಸಬೇಕಾಗುತ್ತದೆ. ನಿಮ್ಮ ಕೌಶಲ್ಯ ಜ್ಞಾನ ಪರಿಣಿತಿಯನ್ನು ಎತ್ತಿ ತೋರಿಸುವಂತಹ ಸ್ಯಾಂಪಲ್ ಗಳನ್ನು ಸೇರಿಸಿ. ರಚಿಸಿದ ನಿಮ್ಮ portfolio ವನ್ನು ಆನ್ಲೈನ್ ನಲ್ಲಿ ಎಲ್ಲರಿಗೆ ಲಭ್ಯವಾಗುವಂತೆ ಅಥವಾ ಕಾಣಿಸುವಂತೆ ಮಾಡಿ. 

ಇದರಿಂದ ಮಾರುಕಟ್ಟೆಯಲ್ಲಿ ಗುರುತಿಸಿಕೊಳ್ಳಲು ಕ್ಲೈಂಟ್ಸ್ ಗಳಿಂದ ಪ್ರಾಜೆಕ್ಟ್ ಗಳನ್ನು ಪಡೆಯಲು ಮತ್ತು Freelancing ನಲ್ಲಿ ಬೇಗನೆ ಯಶಸ್ವಿಯಾಗಲು ಹೆಚ್ಚು ಸಾಧ್ಯವಾಗುತ್ತದೆ. 

ಇದರ ಜೊತೆಗೆ ನಿಮ್ಮದಾದ ಒಂದು ವೆಬ್ ಸೈಟನ್ನು ರಚಿಸಿ.‌ ಇದರಿಂದ ಆನ್ಲೈನ್ ಕಮ್ಯುನಿಟಿಯಲ್ಲಿ ಇನ್ನಷ್ಟು ನಂಬಿಕೆಯನ್ನು ಗಳಿಸಲು ಸಾಧ್ಯವಾಗುತ್ತದೆ.

3. ದರವನ್ನು ನಿರ್ಧರಿಸಿ(Decide Your Rate):

ಫ್ರೀಲ್ಯಾನ್ಸಿಂಗ್ ಕೆರಿಯರ್ ನಲ್ಲಿ ಆರಂಭದಲ್ಲಿ ಪ್ರಾಜೆಕ್ಟ್ ಗಳನ್ನು ಪಡೆಯಲು ಕಡಿಮೆ ದರವನ್ನು ನಿರ್ಧರಿಸಿ. ನಂತರ ನಿರಂತರವಾಗಿ ಕ್ಲೈಂಟ್ ಗಳಿಂದ ಯೋಜನೆಗಳನ್ನು ಪಡೆಯುತ್ತಿದ್ದರೆ ಮತ್ತು ವಿಶ್ವಾಸವನ್ನು ಗಳಿಸಿದ್ದರೆ ನಿಮ್ಮದೇ ಒಂದು ಸ್ಟ್ಯಾಂಡರ್ಡ್ ದರವನ್ನು ನಿರ್ಧರಿಸಬಹುದು. 

ನೀವು ಗಂಟೆಯಂತೆ, ದಿನದಂತೆ ಅಥವಾ ತಿಂಗಳಿನಂತೆ ಶುಲ್ಕವನ್ನು ಸ್ವೀಕರಿಸುತ್ತೀರಾ ಎಂಬುದನ್ನು ನಿರ್ಧರಿಸಿ. ನಿಮ್ಮ ಅನುಭವವನ್ನು ಸೇರಿಸಿ. 

4. ಆನ್ಲೈನ್ ಉಪಸ್ಥಿತಿ (Online Presence):

Fiverr, Upwork ಮತ್ತು Freelancer ನಂತಹ ವೇದಿಕೆಗಳಲ್ಲಿ ಯಾವಾಗಲೂ ಆನ್ಲೈನ್ ಉಪಸ್ಥಿತಿಯನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಅದಕ್ಕಾಗಿ Gig ಗಳನ್ನು ಪ್ರೊಫೈಲ್ಗಳನ್ನು ಸುಂದರವಾಗಿ ರಚಿಸಬೇಕು. 

ನಿಮ್ಮ ಕೌಶಲ್ಯ, ಜ್ಞಾನ ಪ್ರತಿಬಿಂಬಿಸುವ ಸುಂದರವಾದ ಫೋಟೋ ವಿವರವಾದ  ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಒಂದು ವೇಳೆ Gigs, profile ಗಳನ್ನು ರಚಿಸಲು ತಿಳಿದಿದ್ದರೆ, ಈಗಾಗಲೇ ಉಪಸ್ಥಿತಿಯಲ್ಲಿರುವ Freelancer ಗಳ ಗಿಗ್ಸ್, ಪ್ರೊಫೈಲ್ಗಳನ್ನು ನೋಡಿ ಅದರಂತೆ ಆಟಿಮೈಸ್ ಮಾಡಿರಿ.

Also Read: Digital Marketing in Kannada and Benefits of Digital Marketing in Kannada

5. ಬ್ರಾಂಡೆ ಆಗಿ ಗುರುತಿಸಿಕೊಳ್ಳಿ (Identify As Brand):

ಕ್ಲೈಂಟ್ ಗಳ ಪ್ರಾಜೆಕ್ಟ್ ಗಳನ್ನು ಪಡೆಯಲು ಮತ್ತು ಅವರಿಗೆ ನಿಮ್ಮ ಬಗ್ಗೆ ಭರವಸೆ ಮೂಡಿಸಲು ಸಾಮಾಜಿಕ ಮಾಧ್ಯಮಗಳಲ್ಲೂ ಗುರುತಿಸಿಕೊಂಡಿರಿ. ಉದಾಹರಣೆಗೆ ಲಿಂಕ್ಡನ್, ಇನ್ಸ್ಟಾಗ್ರಾಮ್, ಫೇಸ್ಬುಕ್ ಮತ್ತು ಟ್ವಿಟ್ಟರ್. ನಿಮ್ಮ ಜ್ಞಾನ, ಕೌಶಲ್ಯಗಳನ್ನು ಹೆಚ್ಚಿಸಲು ಮತ್ತು ವಿಸ್ತರಿಸಲು workshop, webinarಗಳನ್ನು ಅಟೆಂಡ್ ಮಾಡಿ. 

ಈಗಾಗಲೇ ಮಾಡಿರುವ ಕ್ಲೈಂಟ್ ಗಳಿಂದ ಸಕಾರಾತ್ಮಕ ವಿಮರ್ಶೆಗಳನ್ನು, ರೇಟಿಂಗ್ಸ್ ಗಳನ್ನು ಪಡೆಯಿರಿ. ನಿಮ್ಮ ಜ್ಞಾನ, ಕೌಶಲ್ಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲು ಹಿಂಜರಿಯಬೇಡಿ.

6. ವೃತ್ತಿಪರ ಪ್ರಸ್ತಾಪ ರಚಿಸಿ ((Create a professional proposal):

Freelancing ನಲ್ಲಿ ಅರ್ಜಿ ಸಲ್ಲಿಸುವಾಗ ಯಾವಾಗಲೂ ಪ್ರಾಮಾಣಿಕವಾಗಿರಿ ಮತ್ತು ನಿಮ್ಮ ಕೌಶಲ್ಯಕ್ಕೆ ಸರಿಹೊಂದುವ ಯೋಜನೆಗಳಿಗೆ ಮಾತ್ರ ಪ್ರಸ್ತಾಪವನ್ನು ಸಲ್ಲಿಸಿ. ಕ್ಲೈಂಟ್ ನ ಅಗತ್ಯತೆಗಳಿಗೆ ನಿಮ್ಮ ಕೌಶಲ್ಯಗಳು ಹೊಂದಾಣಿಕೆಯಾಗುವಂತೆ ವಿವರಿಸಿ. ಇದರಲ್ಲಿ ಶುಲ್ಕ, ವೇತನ ಎಲ್ಲವನ್ನು ವಿವರಿಸಿ.

7. ಪರಿಣಾಮಕಾರಿ ಸಂವಹನ (Effective communication):

ಸ್ವತಂತ್ರ ಉದ್ಯೋಗಿಯಾಗಿ ಮುಂದುವರಿಯಲು ಸಂವಹನವು ಮುಖ್ಯವಾಗುತ್ತದೆ. ಏಕೆಂದರೆ ಪ್ರಪಂಚದ ಎಲ್ಲಾ ಮೂಲೆಗಳಿಂದ ಕ್ಲೈಂಟ್ಸ್ ಗಳು ಬರುತ್ತಾರೆ. ಅವರೊಂದಿಗೆ ಕನೆಕ್ಟ್ ಆಗಬೇಕಾದರೆ ಪರಿಣಾಮಕಾರಿ ಸಂವಹನದ ಅವಶ್ಯಕತೆ ಇದೆ. 

8. ಪ್ರತ್ಯೇಕ ಹಣಕಾಸು ಖಾತೆ (Separate Financial Account):

ಸಾಧ್ಯವಾದರೆ ಫ್ರೀಲ್ಯಾನ್ಸಿಂಗ್ ಗೆ ಸಂಬಂಧಿಸಿದ ಪ್ರತ್ಯೇಕ ಹಣಕಾಸು ಖಾತೆಯನ್ನು ನಿರ್ವಹಿಸುವುದು ಉತ್ತಮ. ಆದಾಯ ಮತ್ತು ವೆಚ್ಚಗಳನ್ನು ಟ್ರ್ಯಾಕ್ ಮಾಡಲು ಒಂದು ಪ್ರತ್ಯೇಕ ಅಕೌಂಟ್ ಅನ್ನು ನಿರ್ವಹಿಸುವುದು ಒಳ್ಳೆಯದು.

9. ಗುಣಮಟ್ಟದ ಕೆಲಸ (Quality Work):

ಕ್ಲೈಂಟ್ ಗಳಿಗೆ ಯಾವಾಗಲೂ ಗುಣಮಟ್ಟದ ಕೆಲಸವನ್ನು ನೀಡಲು ಉತ್ಸುಕರಾಗಿರಿ ಮತ್ತು ಸರಿಯಾದ ಸಮಯಕ್ಕೆ ಯೋಜನೆಗಳನ್ನು ಪೂರ್ಣಗೊಳಿಸಲು ಒಲವು ತೋರಿ. ಇದರಿಂದ ಫ್ರೀಲ್ಯಾನ್ಸಿಂಗ್ ನಲ್ಲಿ ಯಶಸ್ವಿಯಾಗಿ ಮುಂದುವರೆಯಲು ಸಾಧ್ಯವಾಗುತ್ತದೆ.  

ಕ್ಲೈಂಟ್ ಗಳಿಂದ ಉತ್ತಮ ವಿಮರ್ಶೆಗಳನ್ನು ಪಡೆಯಿರಿ. ಇದರಲ್ಲೇ ವೃತ್ತಿಜೀವನವನ್ನು ನಿರ್ಮಿಸಲು ಯೋಗ್ಯವಾಗಿದೆ. ಯಾವಾಗಲೂ ನಿರಂತರವಾಗಿ ಕಲಿಯಿರಿ ಮತ್ತು ಆನ್ಲೈನ್ ನಲ್ಲಿ ಉಪಸ್ಥಿತರಾಗಿರ್ರಿ. ಹೊಸದನ್ನು ಕಲಿಯಲು ಸಮಯವನ್ನು ಹೂಡಿಕೆ ಮಾಡಿ ಮತ್ತು ಸುಧಾರಿಸಿ. 

ಕೊನೆಯ ಮಾತು – Freelancing in Kannada

Freelancing ವೇದಿಕೆಗಳು ಪ್ರಪಂಚದಾದ್ಯಂತ ಸಂಪರ್ಕವನ್ನು ಸಾಧಿಸಲು ಅವಕಾಶ ಕಲ್ಪಿಸುತ್ತವೆ. ಮತ್ತು ಜಗತ್ತಿನಾದ್ಯಂತ ವ್ಯವಹರಿಸಲು, ಉದ್ಯೋಗ ನೀಡಲು/ಪಡೆಯಲು ಅತ್ಯುತ್ತಮ ವೇದಿಕೆಯಾಗಿದೆ. 

ಯಾರಾದರೂ ತಮ್ಮ ಕೌಶಲ್ಯವನ್ನು, ಪ್ರತಿಭೆಗಳನ್ನು, ಜಗತ್ತಿನಾದ್ಯಂತ ವಿಸ್ತರಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಎಲ್ಲಿಂದಲಾದರೂ, ಯಾವಾಗಲಾದರೂ ಕೆಲಸ ಮಾಡುವ ಅವಕಾಶವನ್ನು ಒದಗಿಸುತ್ತದೆ.

ಯಾವುದೇ ಸಮಯದ, ಕೆಲಸದ ಒತ್ತಡವಿಲ್ಲದೆ ಮನೆಯಿಂದಲೇ ಕೆಲಸ ಮಾಡಿಕೊಡುವ ಅನುಕೂಲವನ್ನು ಒದಗಿಸುತ್ತದೆ. ಮತ್ತು ಕೈತುಂಬಾ ಸಂಬಳ ನೀಡುವ ಆನ್ಲೈನ್ ವೇದಿಕೆ ಇದಾಗಿದೆ. 

Freelancing ಯಾರಾದರೂ ಮಾಡಬಹುದು, ಯಾವುದೇ ವಯೋಮಿತಿ ಇರುವುದಿಲ್ಲ. ವಿದ್ಯಾರ್ಥಿಗಳು, ನಿವೃತ್ತರಾದವರು, ಗೃಹಿಣಿಯರು ಸ್ವಯಂ ಉದ್ಯೋಗಿಗಳಾಗಿ Freelancing ಮಾಡಬಹುದು. ಆದರೆ ಯಾವುದಾದರೊಂದು ಪರಿಣಿತಿಯನ್ನು ಹೊಂದಿರಬೇಕು. 

ನೆನಪಿಡಿ: Fiverr, Upwork ಮತ್ತು Freelancing ನಂತಹ ವೇದಿಕೆಗಳಲ್ಲಿ ಕೂಡ ಅತಿ ಹೆಚ್ಚು ಪೈಪೋಟಿ ನಡೆಯುತ್ತದೆ. ಇಲ್ಲಿ ಕೂಡ ಕ್ಲೈಂಟ್ ಗಳನ್ನು ಪಡೆದುಕೊಳ್ಳುವುದು ಕಷ್ಟವಾಗಿರುತ್ತದೆ. ಕ್ಲೈಂಟ್ ಸಿಗುವವರೆಗೂ ಕಷ್ಟ. ಆದರೆ ಒಂದು ಕ್ಲೈಂಟ್ ಪ್ರಾಜೆಕ್ಟ್ ಪಡೆದರೆ ಇನ್ನು ಆತನೆ ಪ್ರಾಜೆಕ್ಟ್ ಗಳನ್ನು ನೀಡುತ್ತಾರೆ. 

Leave a Comment